ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಇತ್ತೀಚೆಗೆ ದೈವಾಧೀನರಾದ ಹಿರಿಯ ಲೇಖಕಿ ಮತ್ತು ಜಾಗೃತಿ ಮಹಿಳಾ ಸಂಘಟನೆಯ ಹಿರಿಯ ಸದಸ್ಯೆ ಯಶವಂತಿ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಭಾವಗಾನ ಕಾರ್ಯಕ್ರಮ ಎಸ್. ವಿ. ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಂಘಟನೆಯ ಸದಸ್ಯೆಯರಾದ ಅನುಪಮಾ ಚಿಪ್ಲೊಂಕರ್, ಗಾಯಿತ್ರಿ ವಿ. ಕುಮಾರ್, ವಸುದಾ ಶೆಣೈ, ಡಾ. ಸುಮತಿ ಪಿ., ಮನೀಷಾ ಕಾಮತ್ ಮೊದಲಾದವರು ಭಾವ ಗಾಯನ ಮಾಡಿದರು. ಶ್ಯಾಮಲ ಗೋಪಿನಾಥ ಮತ್ತು ಇಂದಿರಾ. ಕೆ ಉಪಸ್ಥಿತರಿದ್ದರು. ಅಧ್ಯಕ್ಷೆ ಮಿತ್ರ ಪ್ರಭಾ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಮಾಲತಿ. ಜಿ. ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಯಶವಂತಿ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಭಾವಗಾನ ಕಾರ್ಯಕ್ರಮ






























































