ಬೆಳ್ಮಣ್‌ : ಗಾಂಜಾ ಸೇವಿಸಿದ ಯುವಕನ ಬಂಧನ

ಕಾರ್ಕಳ : ಬೆಳ್ಮಣ್‌ ಸಮೀಪ ನೀರ್ಚಾಲಿನಲ್ಲಿ ಗಾಂಜಾ ನಶೆಯಲ್ಲಿ ತೇಲಾಡುತ್ತಿದ್ದ ಮಹಮ್ಮದ್‌ ಅಫಾಮ್‌ ಎಂ. (19) ಎಂಬ ಯುವಕನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಬದಿಯಲ್ಲಿ ಅಮಲಿನಲ್ಲಿ ಅಸಂಬದ್ಧವಾಗಿ ವರ್ತಿಸುತ್ತಿದ್ದ ಯುವಕನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್‌ ಉಪನಿರೀಕ್ಷಕ ದಿಲೀಪ್ ಜಿ. ಆರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.



















































































error: Content is protected !!
Scroll to Top