ಅಪರೇಷನ್‌ ಮಾಡಿದರೆ ಮುಟ್ಟಿನೋಡಿಕೊಳ್ಳುವಂಥ ಏಟು : ಕಾಂಗ್ರೆಸ್‌ಗೆ ಸಿ. ಟಿ. ರವಿ ಎಚ್ಚರಿಕೆ

ಚದುರಂಗ ಆಡಲು ನಮಗೂ ಗೊತ್ತು ಎಂದು ತಿರುಗೇಟು

ಬೆಂಗಳೂರು: ನೀವು ಆಪರೇಷನ್‌ಗೆ ಕೈ ಹಾಕಿದರೆ, ನಾವು ನಿಮಗೆ ಮುಟ್ಟಿ ನೋಡುಕೊಳ್ಳುವಂತೆ ಏಟು ಕೊಡಲು ಸಮರ್ಥರಿದ್ದೇವೆ ಎಂದು ಕಾಂಗ್ರೆಸ್‌ಗೆ ಮಾಜಿ ಶಾಸಕ ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್‌ನವರೇ, ನಿಮಗೆ ನಮ್ಮವರನ್ನು ಕರೆದುಕೊಳ್ಳುವ ಅನಿವಾರ್ಯತೆ ಏನಿದೆ? ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೇವೆ. ಒಂದು ವೇಳೆ ನಾವೇನಾದರೂ ಆಪರೇಷನ್‌ ಮಾಡಿದರೆ ನೀವು ಮೇಲೇಳಲೂ ಆಗಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಅವರ ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಅವರಿಗೆ ಆಗುತ್ತಿಲ್ಲ. ಅವರು ಅತಿರೇಕಕ್ಕೆ ಕೈ ಹಾಕಿದರೆ ನಮಗೆ ಮುಂದೆ ಏನ್ ಮಾಡಬೇಕು ಎಂಬುದು ತಿಳಿದಿದೆ ಎಂದು ತಿಳಿಸಿದರು.
ಚೆಸ್ ಆಟ ಏಕಮುಖ ಅಲ್ಲ. ನಿಮ್ಮಿಂದ ನಮಗೆ ಚೆಕ್‌ಮೆಟ್ ಕೊಡಲು ಬಂದರೆ, ನಮ್ಮಿಂದ ನಿಮಗೂ ಚೆಕ್‌ಮೇಟ್ ಕೊಡಲು ಗೊತ್ತು. ನಾವು ಚೆಕ್‌ಮೆಟ್‌ ಮಾಡಿದರೆ ಸಣ್ಣಪುಟ್ಟ ಸೈನಿಕರಿಗೆ ಮಾಡಲ್ಲ. ನೇರ ರಾಜನಿಗೇ ಚೆಕ್‌ಮೆಟ್‌ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಎಸ್‌ಟಿ ಸೋಮಶೇಖರ್ ಅವರು ಹಿರಿಯ, ಅನುಭವಿ ಶಾಸಕರು. ಅವರ ಬೆಂಬಲಿಗರನ್ನು ಕಾಂಗ್ರೆಸ್‌ನವರು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿ, ಸ್ಥಳೀಯ ಚುನಾವಣೆಗಳ ಆಸೆ ತೋರಿಸಿ ಸೆಳೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಗೆದ್ದರು, ಅಧಿಕಾರಕ್ಕೆ ಏರಿದರು. ಒಂದು ಸ್ಥಿರವಾದ ಸರ್ಕಾರ ಕೊಡಲಿ. ಸ್ಪಷ್ಟ ಬಹುಮತ ಇದ್ದರೂ ಅತಿಯಾಗಿ ಮಾಡಲು ಹೋಗಬೇಡಿ. ನಾವೇನೂ ಸುಮ್ನೆ ಕೂರುವ ಜನ ಅಲ್ಲ ಎಂದು ಎಚ್ಚರಿಕೆ ನೀಡಿದರು.



















































































error: Content is protected !!
Scroll to Top