ಕಾರ್ಕಳ : ವಿಪರೀತ ಮದ್ಯಪಾನ ಚಟ ಹೊಂದಿದ್ದ ಕೌಡೂರು ಗ್ರಾಮದ ನಾಯರಬೆಟ್ಟು ಬಳಿ ಮನೆಯ ಶಿವಾನಂದ (38) ಎಂಬವರು ಬಾವಿಯ ಅಡ್ಡ ರಾಡ್‌ಗೆ ಅದೇ ಬಾವಿಯ ಹಗ್ಗವನ್ನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಹೋದರ ನಿತ್ಯಾನಂದ ಅವರ ಮನೆಯಲ್ಲಿ ವಾಸವಿದ್ದ ಶಿವಾನಂದರಿಗೆ ವಿಪರೀತ ಮದ್ಯಪಾನದ ಚಟ ಇತ್ತು. ಈ ಕಾರಣಕ್ಕೆ ಹೆಂಡತಿ ಅವರನ್ನು ಬಿಟ್ಟು ತವರು ಮನೆಗೆ ಹೋಗಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಶಿವಾನಂದ ಮನೆ ಬಳಿ ಇರುವ ಸರಕಾರಿ ಬಾವಿಯ ರಾಡ್‌ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲೂರು : ಬಾವಿಯ ರಾಡ್‌ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ









































