ಕಾರ್ಕಳ : 15 ವರ್ಷಗಳಿಂದ ನಗರದ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಬಾಲಾಜಿ ಮೊಬೈಲ್ ಶಾಪ್‌ನ ನೂತನ ವಿವೋ ಶೋರೂಮ್ ಜೋಡುರಸ್ತೆಯ ರಾಜಾಪುರ ಸಾರಸ್ವತ ಬ್ಯಾಂಕಿನ ಮುಂಭಾಗದಲ್ಲಿ ಜು. 15 ರಂದು ಬೆಳಗ್ಗೆ 11-20 ಕ್ಕೆ ಶುಭಾರಂಭಗೊಳ್ಳಲಿದೆ. ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಲಿರುವರು.
ಪ್ರಾರಂಭೋತ್ಸವದ ಕೊಡುಗೆ
ನೂತನ ಶೋರೂಮ್‌ನ ಪ್ರಾರಂಭೋತ್ಸವದ ಕೊಡುಗೆಯಾಗಿ ಗ್ರಾಹಕರಿಗೆ ಪ್ರತಿ ಖರೀದಿಯ ಜೊತೆಗೆ ಟೆಂಪರ್ಡ್ ಗ್ಲಾಸ್, ಬ್ಯಾಕ್ ಕವರ್, ನೆಕ್ ಬ್ಯಾಂಡ್, ಈಯರ್ ಫೋನ್, ಆನ್‌ಲೈನ್‌ಕ್ಕಿಂತ ಕಡಿಮೆ ದರದಲ್ಲಿ ಹೆಚ್ಚಿನ ಆಫರ್‌ಗಳು, 15 ಸಾವಿರಕ್ಕಿಂತ ಮೇಲ್ಪಟ್ಟ ವಿವೋ ಮೊಬೈಲ್ ಖರೀದಿಗೆ 1,499 ರೂ. ಬೆಲೆಯ ಈಯರ್ ಬಡ್ಸ್ ಉಚಿತ ಹಾಗೂ ಪ್ರತಿ ಖರೀದಿಯೊಂದಿಗೆ ಕ್ಯಾಶ್ ಬ್ಯಾಕ್ ಕೂಪನ್ ದೊರೆಯಲಿದೆ ಎಂದು ಮಾಲಕ ಪ್ರಶಾಂತ್ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






























































