ಕಾರ್ಕಳ : ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದ 2013-14 ನೇ ಬ್ಯಾಚ್‌ನ ವಿದ್ಯಾರ್ಥಿ ನಿತಿನ್ ಶೆಣೈ ಲೆಕ್ಕಪರಿಶೋಧಕ (ಸಿಎ) ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ. ಇವರು ಮಿಯಾರು ಅಂಗನವಾಡಿ ಸಹಾಯಕಿ ಸರೋಜಿನಿ ಶೆಣೈ ಅವರ ಪುತ್ರ. ಪೈ ನಾಯಕ್ ಆ್ಯಂಡ್ ಅಸೋಸಿಯೇಟ್‌ನಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದರು. ನಿತಿನ್ ಶೆಣೈ ಅವರ ಸಾಧನೆಗೆ ಪೆರ್ವಾಜೆ ಪ್ರೌಢಶಾಲೆಯ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ಪೆರ್ವಾಜೆ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ನಿತಿನ್ ಶೆಣೈ ಸಿಎ ಪರೀಕ್ಷೆಯಲ್ಲಿ ತೇರ್ಗಡೆ



























