ಕಾರ್ಕಳ : ಪಡಿ ಮಂಗಳೂರು, ಕಾರ್ಕಳ ಪುರಸಭೆ, ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಜೆಸಿಐ ಕಾರ್ಕಳ ಗ್ರಾಮಾಂತರ ಇವರ ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ -2023 ಕಾರ್ಯಕ್ರಮವು ಜು. 12 ರಂದು ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ಮತ್ತು ಅದರಿಂದ ರಕ್ಷಣೆ ಪಡೆಯುವ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಲಾಯಿತು. ಇದೇ ಸಂದರ್ಭ ಅಮ್ಮನ ನೆರವು ಟ್ರಸ್ಟ್ ವತಿಯಿಂದ ಸಂಚಾಲಕ ಅವಿನಾಶ್ ಶೆಟ್ಟಿ ಅವರು ಮಕ್ಕಳಿಗೆ ನೋಟ್ ಪುಸ್ತಕವನ್ನು ಹಸ್ತಾಂತರಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಆರೀಸ್ ಅಧ್ಯಕ್ಷತೆ ವಹಿಸಿದ್ದರು. ಪಡಿ ಸಂಸ್ಥೆಯ ಶೋಭಾ ಭಾಸ್ಕರ್, ವಿಜಯ ಕುಮಾರಿ, ತರಬೇತಿ ಸಂಯೋಜಕರಾದ ವಿವೇಕ್, ರೇಷ್ಮಾ , ಶಿಕ್ಷಣ ಇಲಾಖೆಯ ರವಿಚಂದ್ರ ಕಾರಂತ್, ಪೊಲೀಸ್ ಇಲಾಖೆಯ ಸಂತೋಷ್, ಜೆಸಿಐ ಸಂಸ್ಥೆಯ ಮಂಜುನಾಥ್ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಜೇಸಿಂತಾ ಡೇಸಾ, ಕಾಬೆಟ್ಟು ಪ್ರೌಢ ಶಾಲಾ ಹಿರಿಯ ಶಿಕ್ಷಕಿ ಸುಮಾ, ಪುರಸಭೆಯ ಸದಸ್ಯರಾದ ರೆಹಮತ್, ಪ್ರಭಾ, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹರೀಶ್ ಶೆಣೈ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೆ. ನರೇಂದ್ರ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ಕಾಬೆಟ್ಟು ಶಾಲೆಯಲ್ಲಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ

























