ಚಲಿಸುತ್ತಿರುವ ಕಾರಿನ ಮೇಲೆ ಪುಶ್‌ ಅಪ್ಸ್‌ : ಓರ್ವ ಪೊಲೀಸರ ವಶಕ್ಕೆ

ದೆಹಲಿ : ಚಲಿಸುತ್ತಿರುವ ಕಾರಿನ ಮೇಲೆ ವ್ಯಕ್ತಿಯೊಬ್ಬ ಪುಶ್‌ ಅಪ್ಸ್‌ ಮಾಡುತ್ತಿರುವ ವಿಡಿಯೊ ಎಲ್ಲೆಡೆ ವೈರಲ್‌ ಆಗಿದ್ದು, ದೆಹಲಿಯ ಹೊರವಲಯದ ಗುರುಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಕಾರಿನಲ್ಲಿ ಐವರು ಸಂಚರಿಸುತ್ತಿದ್ದು, ಎಲ್ಲರೂ ಮದ್ಯದ ನಶೆಯಲ್ಲಿದ್ದರು. ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ಕಿಟಕಿಯ ಆಚೆ ನೇತಾಡುತ್ತಿದ್ದರು. ಒಬ್ಬ ಕಾರಿನ ಮೇಲೆ ಹತ್ತಿ ಪುಶ್‌ ಅಪ್ಸ್‌ ಮಾಡಿದ್ದಾನೆ. ಅಲ್ಲದೇ ಅಲ್ಲೇ ಕುಳಿತು ಮದ್ಯ ಸೇವಿಸಿದ್ದಾನೆ. ಈ ಸಂಬಂಧ ಗುರುಗ್ರಾಮದ ಪೊಲೀಸರು ಪುಶ್‌ ಅಪ್ಸ್‌ ಮಾಡಿದ ಲೋಕೇಶ್‌ ಎಂಬಾತನನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೇ ಕಾರಿನ ಮಾಲಿಕರಿಗೆ 6,500 ರೂ. ದಂಡವನ್ನು ವಿಧಿಸಿದ್ದಾರೆ. ಪ್ರದೀಪ್‌ ದುಬೆ ಎಂಬಾತ ಈ ಕುರಿತ ವಿಡಿಯೊ ಮತ್ತು ಚಿತ್ರವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.





























































































































error: Content is protected !!
Scroll to Top