ಅಂಚೆ ಇಲಾಖೆಯಲ್ಲಿ 12,827 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 12,828 ಪೋಸ್ಟ್​ ಆಫೀಸ್​ ಹುದ್ದೆಗಳು ಖಾಲಿ ಇದ್ದು, ಕರ್ನಾಟಕದಲ್ಲಿ 48 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು, ಜೂನ್ 11, 2023 ಕೊನೆಯ ದಿನ.

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. https://indiapostgdsonline.gov.in/ ವೆಬ್ ಸೈಟ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ವಯೋಮಿತಿ
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 11, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು- 3 ವರ್ಷ, SC/ ST ಅಭ್ಯರ್ಥಿಗಳು- 5 ವರ್ಷ, PWD (ಜನರಲ್) ಅಭ್ಯರ್ಥಿಗಳು- 10 ವರ್ಷ, PWD (OBC) ಅಭ್ಯರ್ಥಿಗಳು- 13 ವರ್ಷ, PWD (SC/ST) ಅಭ್ಯರ್ಥಿಗಳು- 15 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ
ಮಹಿಳಾ/ SC/ST/PwD & ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು 100 ರೂ. ಆನ್ ಲೈನ್ ಮೂಲಕ ಪಾವತಿಸಬೇಕು. ಮೆರಿಟ್ ಲಿಸ್ಟ್​, ದಾಖಲಾತಿ ಪರಿಶೀಲನೆ, ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ವೇತನ: ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್​ಮಾಸ್ಟರ್)- ಮಾಸಿಕ 12,000- 29,380 ರೂ., ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್​ಮಾಸ್ಟರ್​​)- ಮಾಸಿಕ 10,000 24,470 ರೂ.









































































error: Content is protected !!
Scroll to Top