ಜೇಸಿಐ ಕಾರ್ಕಳ ವತಿಯಿಂದ ಪುರಸಭಾ ವ್ಯಾಪ್ತಿಯಲ್ಲಿ ಉಚಿತ ನೀರು ಸರಬರಾಜು

ಕಾರ್ಕಳ : ಸುವರ್ಣ ಸಂಭ್ರಮಾಚರಣೆಯಲ್ಲಿರುವ ಜೇಸಿಐ ಕಾರ್ಕಳ ಹಾಗೂ ಜಲ್ವಾಯ್‌ ನೂರ್‌ ಮದರಸದ ಸಂಯುಕ್ತ ಆಶ್ರಯದಲ್ಲಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಿಗೆ ನೀರು ಸರಬರಾಜಿಗೆ ಮೇ 25 ರಂದು ಚಾಲನೆ ನೀಡಲಾಯಿತು. ಜೇಸಿ ಸಮದ್‌ ಖಾನ್‌ ಅವರ ಮಗಳ ಹುಟ್ಟುಹಬ್ಬದ ಪ್ರಯುಕ್ತ 2016 ರಿಂದ ಪ್ರತಿವರ್ಷ ಈ ಸಮಯದಲ್ಲಿ ನೀರಿನ ಅಭಾವವಿರುವ ಪುರಸಭಾ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಬಾರಿ ಮೇ 25 ರಿಂದ ಸರಿಯಾಗಿ ನೀರಿನ ವ್ಯವಸ್ಥೆಯಾಗುವವರೆಗೂ ನೀರು ಸರಬರಾಜು ಕಾರ್ಯ ನಡೆಯುತ್ತದೆ.

ಗುರುವಾರದಂದು ಜೇಸಿ ವಲಯ ಕಾರ್ಯಕ್ರಮ ನಿರ್ದೇಶಕ ಜೇಸಿ ಕೃಷ್ಣ ಪವರ್‌ ಅವರು 8ನೇ ವಾರ್ಡ್‌ನ ಮಾರ್ಕೆಟ್‌ ರಸ್ತೆಯಲ್ಲಿ ನೀರು ಸರಬರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕಾರ್ಕಳ ಜೇಸಿಐ ಅಧ್ಯಕ್ಷ ವಿಘ್ನೇಶ್‌ ಪ್ರಸಾದ್‌, ಜಲ್ವಾಯ್‌ ನೂರ್‌ ಮದರಸದ ಅಧ್ಯಕ್ಷ ನಾಸೀರ್‌ ಶೇಖ್‌, ಜೇಸಿ ಸದಸ್ಯ ದಿನೇಶ್‌ ಆಚಾರ್ಯ, ವಲಯ ಪೂರ್ವ ಉಪಾಧ್ಯಕ್ಷ ಸಮದ್‌ ಖಾನ್‌ ಮೊದಲಾದವರು ಉಪಸ್ಥಿತರಿದ್ದರು.

ನೀರು ಸರಬರಾಜಿಗೆ ಚಾಲನೆ
error: Content is protected !!
Scroll to Top