ಜೇಸಿಐ ಕಾರ್ಕಳ ವತಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಸೆಲ್ಯೂಟ್‌ ಟು ಸೈಲೆಂಟ್‌ ಸ್ಟಾರ್‌ ಸನ್ಮಾನ

ಕಾರ್ಕಳ : ಸುವರ್ಣ ಸಂಭ್ರಮಾಚರಣೆಯಲ್ಲಿರುವ ಜೇಸಿಐ ಕಾರ್ಕಳ ವತಿಯಿಂದ ನಡೆಯುವ ಸೆಲ್ಯೂಟ್‌ ಟು ಸೈಲೆಂಟ್‌ ಸ್ಟಾರ್‌ ಎಂಬ ಮಾಸಿಕ ಕಾರ್ಯಕ್ರಮದಡಿಯಲ್ಲಿ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಬಿ. ಎಂ. ಸಂಜೀವ, ಜಯ ಮೂಲ್ಯ ಹಾಗೂ ಸುಜಯ್‌ ನಾಯಕ್‌ ಅವರನ್ನು ಮೇ 26 ರಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳ ಅಧ್ಯಕ್ಷ ವಿಘ್ನೇಶ್‌ ಪ್ರಸಾದ್‌, ಪೂರ್ವಧ್ಯಕ್ಷರಾದ ಜೇಸಿ ಶೇಖರ್‌ ಹೆಚ್.‌, ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್‌ ಮೋನಿಸ್‌, ಪುರಸಭಾ ಮಾಜಿ ಸದಸ್ಯ ಪ್ರಕಾಶ್‌ ರಾವ್‌, ಜೇಸಿಐ ಕಾರ್ಕಳದ ಉಪಾಧ್ಯಕ್ಷ ಪ್ರಚೀತ್‌ ಕುಮಾರ್‌ ಉಪಸ್ಥಿತರಿದ್ದರು.

error: Content is protected !!
Scroll to Top