ಎಂಪಿಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ಫೆಸ್ಟ್ – ಪ್ಲೇ ಸ್ಟೋರ್ ಸಮಾರೋಪ

ಕಾರ್ಕಳ : ಶಿಕ್ಷಣದಲ್ಲಿ ಸೃಜನಾತ್ಮಕ ಕಾರ್ಯಚಟುವಟಿಕೆಗಳ ಆಯೋಜನೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಸಿದ್ದಾಂತದ ಬದಲು ಸರ್ವೈವಲ್ ಆಫ್ ದ ಪಾಸ್ಟೆಸ್ಟ್ ಸಿದ್ದಾಂತವು ಪ್ರಸ್ತುತ ಜಗತ್ತಿಗೆ ಅನ್ವಯಿಸುತ್ತದೆ ಎಂದು ಮಂಗಳೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ ಕೆ. ಅಭಿಪ್ರಾಯಪಟ್ಟರು. ಅವರು ಮೇ 23 ರಂದು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ವಿಭಾಗದ ವತಿಯಿಂದ ನಡೆದ ರಾಜ್ಯಮಟ್ಟದ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಫೆಸ್ಟ್ ಪ್ಲೇ ಸ್ಟೋರ್ – 2023 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿವಿಧ ಕಾಲೇಜುಗಳಿಂದ ಒಟ್ಟು 10 ತಂಡಗಳು ಭಾಗವಹಿಸಿದ್ದು ಫೈನಾನ್ಸ್ ಈವೆಂಟ್‌ನಲ್ಲಿ ಉಡುಪಿ ಪೂರ್ಣಪ್ರಜ್ಞಾ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಪ್ರಥಮ ಹಾಗೂ ಮಂಗಳೂರು ಎ.ಜೆ. ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ದ್ವಿತೀಯ ಸ್ಥಾನ ಪಡೆಯಿತು. ಮಾರ್ಕೆಟಿಂಗ್‌ ಈವೆಂಟ್‌ನಲ್ಲಿ ಮಂಗಳೂರು ಕೆನರಾ ಕಾಲೇಜು ಪ್ರಥಮ ಹಾಗೂ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಿಸಿನೆಸ್ ಲಾ ಈವೆಂಟ್‌ನಲ್ಲಿ ಮಂಗಳೂರು ಎ.ಜೆ. ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಪ್ರಥಮ, ಮೂಡಬಿದ್ರೆ ಮೈಟ್‌ ಕಾಲೇಜು ದ್ವಿತೀಯ ಸ್ಥಾನ. ಬಿಸಿನೆಸ್ ಕ್ವಿಜ್ ಈವೆಂಟ್‌ನಲ್ಲಿ ಉಡುಪಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಪ್ರಥಮ ಹಾಗೂ ಮಂಗಳೂರು ಎ.ಜೆ. ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ದ್ವಿತೀಯ ಸ್ಥಾನ ಪಡೆದಿದೆ.

ಬೆಸ್ಟ್ ಮ್ಯಾನೇಜರ್ ಸ್ಥಾನವನ್ನು ಮಂಗಳೂರು ಕೆನರಾ ಕಾಲೇಜು ಪಡೆದುಕೊಂಡರೆ, ಎಂ.ಪಿ.ಎಂ. ಸ್ಪೆಷಲ್ ಈವೆಂಟ್‌ನಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿದರು. ಮಂಗಳೂರು ಎ.ಜೆ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ರನ್ನರ್ ಅಪ್ ಪ್ರಶಸ್ತಿಯನ್ನು ಮಂಗಳೂರು ಕೆನರಾ ಕಾಲೇಜು ಪಡೆಯಿತು.

ಕಾಲೇಜು ಪ್ರಾಂಶುಪಾಲ ಡಾ.ಕಿರಣ್ ಎಂ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ. ವಿದ್ಯಾಧರ್ ಹೆಗ್ಡೆ ಎಸ್., ಫೆಸ್ಟ್ ಸಂಯೋಜಕ ಪ್ರೊ. ಮಂಜುನಾಥ ಬಿ., ವಿದ್ಯಾರ್ಥಿ ಸಂಯೋಜಕಿ ಪ್ರಿಯಾಂಕ ಪೈ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕಿ ಪ್ರೊ. ಸುಷ್ಮಾ ರಾವ್ ಕೆ. ವರದಿ ವಾಚಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸಂಧ್ಯಾ ಭಂಡಾರಿ ಸಹಕರಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಮೈತ್ರಿ ಬಿ. ಸ್ವಾಗತಿಸಿದರು. ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕಿ ಪ್ರಿಯಾಂಕ ಪೈ ವಂದಿಸಿದರು.











































































error: Content is protected !!
Scroll to Top