ಕಾರ್ಕಳ : ಅನಂತಶಯನ ಅನಂತ ಪದ್ಮನಾಭ ದೇವಸ್ಥಾನದ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪಗ್ರತಿ ವಿದ್ಯಾಸಂಸ್ಥೆಯಲ್ಲಿ ನೇರವಾಗಿ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕೆ ಪ್ರವೇಶಾತಿ ಪ್ರಾರಂಭವಾಗಿದೆ. ಪ್ರಾಥಮಿಕ ಹಂತದಿಂದ 9ನೇ ತರಗತಿಯವರೆಗೆ ಯಾವುದೇ ಹಂತದಲ್ಲಿ ಫೇಲ್ ಅಥವಾ ಪಾಸ್ ಆಗಿದ್ದು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರೆ ಖಾಸಗಿಯಾಗಿ ಸರಕಾರಿ ಸರ್ಟಫಿಕೇಟ್‌ನೊಂದಿಗೆ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನೇರವಾಗಿ ಎಸ್ಸೆಸೆಲ್ಸಿ ವಿದ್ಯಾಭ್ಯಾಸ ಮಾಡಬಹುದು. ಇನ್ನು ಸರಕಾರಿ ಸರ್ಟಿಫಿಕೆಟ್‌ನೊಂದಿಗೆ ಖಾಸಗಿಯಾಗಿ ಕಲಾ ಅಥವಾ ವಾಣಿಜ್ಯ ವಿಷಯದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.
ಸಂಸ್ಥೆಯಲ್ಲಿ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ವತಿಯಿಂದ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡಿ ISO 9001:2015 ಸರ್ಟಿಫೈಡ್ ಪ್ರಮಾಣಪತ್ರವನ್ನು ನೀಡಲಾಗುವುದು. ಈಗಾಗಲೇ ನೋಂದಾವಣೆ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ನೇರವಾಗಿ ಸಂಸ್ಥೆಯನ್ನು ಭೇಟಿ ನೀಡಿ ಅಥವಾ 7204967666, 7204967677 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.







































