ಕಾರ್ಕಳ : ಕಾರ್ಕಳದ ವಿವಿಧೆಡೆ ಮೇ 23ರ ಮಧ್ಯಾಹ್ನದ ವೇಳೆ ಜೋರಾದ ಮಳೆ ಹಾಗೂ ಗಾಳಿ ಬೀಸಿದ ಪರಿಣಾಮವಾಗಿ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ಮುಡಾರು ಗ್ರಾಮದಲ್ಲಿ ಸಂಭವಿಸಿದೆ. ರಾಮೆಟ್ಟು ಫಲ್ಕೆ ಗುಲಾಬಿಯವರ ಮನೆಯ ಮೇಲೆ ಮರ ಬಿದ್ದಿದ್ದು, ಹಂಚು ಹಾಗೂ ಮನೆಯ ಮೇಲೆ ಹಾಕಿದ್ದ ಶೀಟ್ ಹಾನಿಯಾಗಿದ್ದು, ಅಂದಾಜು 10 ಸಾ. ರೂ. ನಷ್ಟ ಉಂಟಾಗಿದೆ. ಮನೆಯ ಒಂದು ಬದಿಗೆ ಮರ ಬಿದ್ದಿದ್ದು, ಮನೆಯೊಳಗಿದ್ದವರ ಪ್ರಾಣಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ.
ಕಾರ್ಕಳದಲ್ಲಿ ಗಾಳಿ ಮಳೆ – ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ






























































