ಪೊಲೀಸ್‌ ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಚಿಕ್ಕಮಗಳೂರು : ಮಹಿಳೆಯೋರ್ವರರು ಪೊಲೀಸ್‌ ಠಾಣೆಯ ಮಹಡಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎ. 14 ರಂದು ಮೂಡಿಗೆರೆಯಲ್ಲಿ ಸಂಭವಿಸಿದೆ. ಶಿಲ್ಪ ಎಂಬುವವರೇ ಆತ್ಮಹತ್ಯಗೆ ಯತ್ನಿಸಿದ ಮಹಿಳೆ. ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಗೆ ಪ್ರಕರಣವೊಂದರಲ್ಲಿ ಕೋರ್ಟ್‌ ಸಮನ್ಸ್‌ ಜಾರಿಯಾಗಿತ್ತು. ಇದರಿಂದ ಬೇಸತ್ತು ಆತ್ಮಹತ್ಯಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಶಿಲ್ಪ ಮತ್ತು ಆಕೆಯ ಅಕ್ಕನ ನಡುವಿನ ಗಲಾಟೆ ಹಾಗೂ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿ ಮೇಲೆ ನಡೆಸಿದ ಹಲ್ಲೆಯ ಆರೋಪಕ್ಕೆ ಸಂಬಂಧಿಸಿ 2022 ರಲ್ಲಿ ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ನ್ಯಾಯಲಯಕ್ಕೆ ಹಾಜರಾಗದ ಕಾರಣ ಶಿಲ್ಪ ವಿರುದ್ಧ ಸಮನ್ಸ್‌ ಜಾರಿಯಾಗಿತ್ತು ಎಂದು ತಿಳಿದು ಬಂದಿದೆ.

ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.





























































































































error: Content is protected !!
Scroll to Top