ಕಾರ್ಕಳ: ಬಾತ್‌ರೂಮ್ ಹೊಂಡ ತೆಗೆಯಲು ಆಕ್ಷೇಪಿಸಿದ ವಿಚಾರವಾಗಿ ನಡೆದ ಜಗಳದಲ್ಲಿ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಗರದ ಬಂಗ್ಲೆಗುಡ್ಡೆಯಲ್ಲಿ ಸಂಭವಿಸಿದೆ. ಕಸಬಾ ಗ್ರಾಮ ಬಂಗ್ಲೆಗುಡ್ಡೆಯಲ್ಲಿ ಮಹಾಂತೇಶ್ ಎಂಬವರು ಮನೆ ಪಕ್ಕ ಬಾತ್‌ರೂಮ್ ಹೊಂಡ ತೆಗೆಯುತ್ತಿರುವಾಗ ಸಂತೋಷ, ರಮೇಶ, ಪ್ರಸನ್ನ, ಪ್ರತಾಪ, ಪುಟ್ಟಮ್ಮ, ವಿಶಾಲ, ಅಶ್ವಿನಿ, ಶ್ಯಾಮ, ಕವಿತಾ(ಬಕ್ಕು) ಎಂಬವರು ಆಕ್ಷೇಪಿಸಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ಮಹಾಂತೇಶ್ ಅವರ ಹೆಂಡತಿ ಮಮತಾ ಮೇಲೂ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಮಮತಾ ಮುಖಕ್ಕೆ ಕಲ್ಲಿನಿಂದ ಗುದ್ದಿದ ಪರಿಣಾಮ ಗಂಭೀರ ಸ್ವರೂಪದ ಗಾಯವಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಂಡ ತೆಗೆಯುವ ವಿಚಾರವಾಗಿ ಗಲಾಟೆ : ಮಹಿಳೆ ಮೇಲೆ ಹಲ್ಲೆ
























