ಮಾ. 22 : ಮುಡಾರು ಶಿವಕೇಸರಿ ಫ್ರೆಂಡ್ಸ್‌ ವತಿಯಿಂದ ಸಾಮೂಹಿಕ ಶನಿಪೂಜೆ

ಕಾರ್ಕಳ : ಮುಡಾರು ಶಿವಕೇಸರಿ ಫ್ರೆಂಡ್ಸ್‌ ವತಿಯಿಂದ ಮಾ. 22 ರಂದು ಬೆಳಗ್ಗೆ 9 ಗಂಟೆಗೆ ಮುಡಾರು ಸನಾತನ ಕ್ರೀಡಾಂಗಣದಲ್ಲಿ ಪ್ರಥಮ ವರ್ಷದ ಸಾಮೂಹಿಕ ಶನಿಪೂಜಾ ಕಾರ್ಯಕ್ರಮ ಜರುಗಲಿದೆ.
ಧಾರ್ಮಿಕ ಸಭೆ
ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಚಿವ ವಿ. ಸುನೀಲ್‌ ಕುಮಾರ್‌ ಉಪಸ್ಥಿತರಿರಲಿದ್ದು, ರಾಜ್ಯ ಫೆಡರೇಶನ್‌ ಆಫ್‌ ಕರ್ನಾಟಕ ಕ್ವಾರಿ ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕಿ ಸಂಗೀತಾ ಕುಲಾಲ್‌ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪವರ್‌ ಪಾಯಿಂಟ್‌ ಮಾಲಕ ಮಹಾವೀರ ಜೈನ್, ಮುಡಾರು ಗ್ರಾ. ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಪಿಡಬ್ಲ್ಯುಡಿ ಗುತ್ತಿಗೆದಾರ ಪ್ರಮೋದ್‌ ಕುಮಾರ್‌ ಜೈನ್‌, ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ, ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯ ಡಿ. ಬಂಗೇರ, ಮಂಜುನಾಥ ಅರ್ಥ್‌ ಮೂವರ್ಸ್‌ ಮಾಲಕ ಪ್ರಶಾಂತ್‌ ಸೇರ್ವೆಗಾರ್, ಹಿಂದೂ ಜಾಗರಣ ವೇದಿಕೆ ಸಂಚಾಲಕ ಗುರುಪ್ರಸಾದ್‌ ನಾರಾವಿ, ದ.ಕ.ಸ.ಹಾ.ಉ.ಒಕ್ಕೂಟದ ಸುಧಾಕರ್‌ ಶೆಟ್ಟಿ, ಬಜರಂಗದಳದ ವಲಯ ಸಂಚಾಲಕ ಸಂತೋಷ್‌ ಶೆಟ್ಟಿ, ಶಿವಕೇಸರಿ ಫ್ರೆಂಡ್ಸ್‌ನ ಅಧ್ಯಕ್ಷ ರಿತೇಶ್‌ ಪೂಜಾರಿ ಉಪಸ್ಥಿತರಿರುವರು ಎಂದು ಶಿವಕೇಸರಿ ಫ್ರೆಂಡ್ಸ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top