ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ : 4 ಯುವಕರ ಸೆರೆ

ಕಾರ್ಕಳ : ಕಸಬಾ ಗ್ರಾಮದ ಸ್ವರಾಜ್ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ನಾಲ್ವರು ಯುವಕರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಮೀನುಗಾರಿಕೆ ಇಲಾಖೆಯ ರಸ್ತೆ ನಿವಾಸಿಗಳಾದ ನವನೀತ್‌ (33), ಪುನೀತ್‌ ಕುಮಾರ್‌ (35), ಶರತ್‌ ಕುಮಾರ್‌ (27), ಅಜಯ್‌ (25) ಬಂಧಿಸಲ್ಪಟ್ಟ ಯುವಕರು.
ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಗುರುವಾರ ರಾತ್ರಿ ಗಸ್ತು ಪಾಳಿಯಲ್ಲಿದ್ದ ವೇಳೆ ಈ ನಾಲ್ಕು ಯುವಕರು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿತ್ತು. ಅವರಿಂದ ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್‌ ಗ್ಲಾಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ಜೂಜು : ಯುವಕ ಬಂಧನ
ಅಜೆಕಾರು : ಕೆರ್ವಾಶೆ ಗ್ರಾಮದ ವೈನ್‌ ಶಾಪ್‌ ಬಳಿ ಮಟ್ಕಾ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿ ಹರೀಶ ಮೂಲ್ಯ ಎಂಬ ಯುವಕನನ್ನು ಬಂಧಿಸಿದ್ದಾರೆ. ಮಾ.16ರಂದು ಅಜೆಕಾರು ಠಾಣೆಯ ಉಪನಿರೀಕ್ಷಕ ಲಕ್ಷ್ಮಣ ಅವರು ಬೆಳಗ್ಗೆ 11 ಗಂಟೆ ವೇಳೆಗೆ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿ ಜತೆ ದಾಳಿ ಮಾಡಿದ್ದಾರೆ. ಹರೀಶ್‌ ಮೂಲ್ಯನಿಂದ 1955 ರೂ. ನಗದು, ಮಟ್ಕಾ ಚೀಟಿಗಳು ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































































































error: Content is protected !!
Scroll to Top