ಎಲ್‌ಐಸಿ ನೇಮಕಾತಿ : 9,394 ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆ

ಹೊಸದಿಲ್ಲಿ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 9,394 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ ಆಗಿರುವ licindia.in ಭೇಟಿ ನೀಡಬೇಕಾಗಿದೆ. ಫೆ.10ರೊಳಗೆ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: ಜನವರಿ 21, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10, 2023
ವಯಸ್ಸಿನ ಮಿತಿ: 21ರಿಂದ 30 ವರ್ಷದೊಳಗಿನವರಾಗಿರಬೇಕು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ನಂತರ ಅಭ್ಯರ್ಥಿಗಳು ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.
ಹುದ್ದೆಯ ಮಾಹಿತಿ
ದಕ್ಷಿಣ ವಲಯ ಕಚೇರಿ: 1516 ಹುದ್ದೆಗಳು
ದಕ್ಷಿಣ ಮಧ್ಯ ವಲಯ ಕಚೇರಿ: 1408 ಹುದ್ದೆಗಳು
ಉತ್ತರ ವಲಯ ಕಚೇರಿ: 1216 ಹುದ್ದೆಗಳು
ಉತ್ತರ ಕೇಂದ್ರ ವಲಯ ಕಚೇರಿ: 1033 ಹುದ್ದೆಗಳು
ಪೂರ್ವ ವಲಯ ಕಚೇರಿ: 1049 ಹುದ್ದೆಗಳು
ಪೂರ್ವ ಕೇಂದ್ರ ವಲಯ ಕಚೇರಿ: 669 ಹುದ್ದೆಗಳು
ಕೇಂದ್ರ ವಲಯ ಕಚೇರಿ: 561 ಹುದ್ದೆಗಳು
ಪಶ್ಚಿಮ ವಲಯ ಕಚೇರಿ: 1942 ಹುದ್ದೆಗಳು
ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು https://licindia.in/BottomLinks ನಲ್ಲಿ ವೃತ್ತಿಯ ಪುಟವನ್ನು ವೀಕ್ಷಿಸಿ.

Latest Articles

error: Content is protected !!