ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಮಾಸಿಕ ಕಾರ್ಯಕ್ರಮ : ಸಾಂಸ್ಕೃತಿಕ ಸೌರಭ

ಕಾರ್ಕಳ : ಸ್ವರ್ಣ ಕಾರ್ಕಳದ ಪರಿಕಲ್ಪನೆಯೊಂದಿಗೆ ಕಾರ್ಕಳದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಿರಂತರವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುತ್ತಿರುವ ಸುನೀಲ್ ಕುಮಾರ್‌ ಅವರ ಕಾರ್ಯತತ್ಪರತೆ ಶ್ಲಾಘನೀಯ. ಓರ್ವ ವ್ಯಕ್ತಿ ತನ್ನ ಸಮಾಜಮುಖಿ ಚಟುವಟಿಕೆಗಳಿಂದ ಶಕ್ತಿಯಾಗಿ ಪರಿವರ್ತನೆಗೊಂಡು ಸಮಾಜಕ್ಕೆ ಮಾದರಿಯಾಗುತ್ತಾನೆ ಎಂಬುದಕ್ಕೆ ಸುನೀಲ್‌ ಕುಮಾರ್‌ ಉತ್ತಮ ನಿದರ್ಶನ ಎಂದು ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್‌ ಕೋಟ್ಯಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಡಿ. 24 ರಂದು ಕೋಟಿ ಚೆನ್ನಯ್ಯ ಥೀಮ್‌ ಪಾರ್ಕ್‌ನಲ್ಲಿ ಮಾಸಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತಾನಡಿದ ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ್‌ ಭಟ್‌, ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಕೇವಲ ಪ್ರವಾಸಿ ಸ್ಥಳಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪುಗೊಳ್ಳತ್ತಿರುವುದು ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಅಭಿವೃದ್ಧಿ ಸಮಿತಿ ಸದಸ್ಯರಾದ ಹರೀಶ್‌ ಅಮೀನ್‌, ವಿಶ್ವನಾಥ್‌ ಶೆಟ್ಟಿ, ಅನಂತಕೃಷ್ಣ ಶೆಣೈ, ಪದ್ಮಪ್ರಸಾದ್‌ ಜೈನ್‌, ಭರತ್‌ ಸಿ. ಅಂಚನ್‌, ಕರುಣಾಕರ್‌ ಎಸ್‌. ಕೋಟ್ಯಾನ್‌ ಮತ್ತು ರೋಹಿತ್‌ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ನಳಿನಿ ಎಸ್.‌ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ಕಲಾ ತಂಡಗಳಿಂದ ಸುಗಮ ಸಂಗೀತ, ಜಾನಪದ ಸಂಗೀತ, ಚಿಟ್ಟಿಮೇಳ, ಪಾಳೇಗಾರ ವೇಷ, ಪೂಜಾ ಕುಣಿತ, ಸೋಮನ ಕುಣಿತ ಮತ್ತು ವೀರಗಾಸೆ ಕುಣಿತ ಜರಗಿತು. ಬೈಲೂರು ಚೈತನ್ಯ ಕಲಾವಿದರು ತಂಡದಿಂದ ವಾರ್ಡ್‌ ನಂ – 2 ನಾಟಕ ನಡೆಯಿತು. ತಂಡದ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

















































error: Content is protected !!
Scroll to Top