ಕಾರ್ಕಳ : ವಿಶ್ವಹಿಂದು ಪರಿಷದ್ ಬಜರಂಗದಳದ ಕಲಂಬಾಡಿ ಪದವಿನ ಹಿಂದೂ ಸಾಮ್ರಾಟ್ ಘಟಕ ವತಿಯಿಂದ ಡಿ. 24 ರಂದು ಕಲಂಬಾಡಿ ಪದವು ನಾಗನಕಟ್ಟೆಯ ಮುಂಭಾಗದಲ್ಲಿ ಸಾರ್ವಜನಿಕ ಶನಿಪೂಜೆ ಮತ್ತು ಕಥಾಪ್ರವಚನ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂನಾ ಉದ್ಯಮಿ ವಿನಯ್ ಶ್ಯಾಮ್ ಹೆಗ್ಡೆ ವಹಿಸಿದ್ದರು. ಕುಟುಂಬ ಪ್ರಭೋದನದ ಹಿರಿಯ ಗಜಾನಂದ ಪೈ ಕುಟುಂಬ ಚಿಂತನ ಬೌದ್ಧಿಕ್ ನೆರವೇರಿಸಿದರು. ಈ ಸಂದರ್ಭ 18 ವರ್ಷಗಳ ಕಾಲ ಪದವು ಅಂಗನವಾಡಿ ಕೇಂದ್ರದಲ್ಲಿ ಆಯಾ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸುನಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಜರಂಗದಳದ ಪ್ರಾಂತ ಸಂಯೋಜಕ ಸುನೀಲ್ ಕೆ. ಆರ್., ಕಲಂಬಾಡಿ ಪದವು ಹಿಂದೂ ಸಾಮ್ರಾಟ್ ಘಟಕದ ಅಧ್ಯಕ್ಷ ಸುರೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹರಿದಾಸ ಡಾ. ಎಸ್. ಪಿ. ಗುರುದಾಸ್ ಮಂಗಳೂರು ಅವರಿಂದ ಶ್ರೀ ಶನಿ ಮಹಾತ್ಮೆ ಕಥಾ ಕೀರ್ತನೆ ಜರಗಿತು.
ಕಲಂಬಾಡಿ ಪದವು : ಹಿಂದೂ ಸಾಮ್ರಾಟ್ ಘಟಕ ವತಿಯಿಂದ ಶನಿಪೂಜೆ ಹಾಗೂ ಕಥಾಪ್ರವಚನ
























