ಡಾ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ 55ನೇ ವರ್ಧಂತ್ಯುತ್ಸವ

ಧರ್ಮಸ್ಥಳದಲ್ಲಿ ಮನೆ ಮಾಡಿದ ಸಂಭ್ರಮ

ಮಂಗಳೂರು(ಅ.24): ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕದ 55 ನೇ ವರ್ಧಂತ್ಯುತ್ಸವ ಅ.24ರಂದು ಧರ್ಮಸ್ಥಳದಲ್ಲಿ ನಡೆಯಲಿದ್ದು, ಸಂಭ್ರಮ ಸಡಗರ ಮನೆಮಾಡಿದೆ.

ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಬಸದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಭಕ್ತರು, ದೇವಾಲಯದ ನೌಕರರು, ನಾಗರೀಕರು, ವಿವಿಧ ಸಂಸ್ಥೆಗಳ ನೌಕರರು, ಅಭಿಮಾನಿಗಳು ವೀರೇಂದ್ರ ಹೆಗಡೆಯವರಿಗೆ ಗೌರವ ಸಮರ್ಪಿಸಲಿದ್ದಾರೆ,

ವೀರೇಂದ್ರ ಹೆಗಡೆಯವರ ನಿವಾಸ, ದೇವಾಲಯ, ವಸತಿ ಛತ್ರಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಸೋಮವಾರ ಸಂಜೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಕೆ. ಹರೀಶ್ ಪೂಂಜ, ಪ್ರತಾಪ ಸಿಂಹ ನಾಯಕ್‌, ಕೆ. -ಹರೀಶ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.

Latest Articles

error: Content is protected !!