ಕಾರ್ಕಳ : ಜೀವನದಲ್ಲಿ ಯಶಸ್ಸು ಗಳಿಸಲು ನಿರ್ದಿಷ್ಠ ಗುರಿಯನ್ನು ಹೊಂದಿರುವುದು ಮಾತ್ರವಲ್ಲದೇ ಆ ಗುರಿಯನ್ನು ಮಟ್ಟುವ ಅಚಲ ಮನಸ್ಸು ಹಾಗೂ ದೃಢ ನಿರ್ಧಾರ ಅತ್ಯಗತ್ಯ ಎಂದು ಎಸ್.ವಿ.ಎಸ್. ಕಾಲೇಜು ಬಂಟ್ವಾಳದ ವಿಶ್ರಾಂತ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2021-22ನೇ ಸಾಲಿನ ವಾರ್ಷಿಕ ಪ್ರತಿಭಾ ಪುಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಜ್ಞಾನ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಬೇಕಿದೆ – ಡಾ. ವರದರಾಜ ಚಂದ್ರಗಿರಿ
ಸಾಹಿತಿ, ಪುತ್ತೂರು ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ನಿರಂತರ ಬದಲಾವಣೆಯ ಕಾಲದಲ್ಲಿರುವ ನಾವು ನಮ್ಮ ಸಂಪೂರ್ಣ ಸಾಮರ್ಥ್ಯದಿಂದ ಜ್ಞಾನವನ್ನುಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಬೇಕಿದೆ. ಜ್ಞಾನಕ್ಕೆ ಮಿತಿಯಿಲ್ಲ. ವಿದ್ಯಾರ್ಥಿಗಳು ಜೀವನ ಮೌಲ್ಯದೊಂದಿಗೆ ಹೊಸತನವನ್ನು ಕಲಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿ ಮನೀಷ್, ಅಜಿತ್, ಧನ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೀಳ್ಕೊಡುಗೆ
ಕಾಲೇಜಿನಿಂದ ವರ್ಗಾವಣೆ ಹೊಂದಿರುವ ವಾಣಿಜ್ಯ ವಿಭಾಗದ ಮುಖ್ಸಸ್ಥೆ ಜ್ಯೋತಿ ಎಲ್. ಜನ್ನೆ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿ ವೈದ್ಯ, ಅರ್ಥಶಾಸ್ತ್ರ ವಿಭಾಗದ ವಿದ್ಯಾ ಡಿ. ಅವರನ್ನು ಸನ್ಮಾನಿಸಿ, ಇದೇ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಚೈತ್ರಾ ಕುಡ್ವಾ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ವಿದ್ಯಾಧರ ಹೆಗ್ಡೆ ಎಸ್. ಸ್ವಾಗತಿಸಿ, ಸುಶ್ಮಾ ರಾವ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಮುಕ್ತಿವರ್ಧನ ವಂದಿಸಿದರು.
ಅಪರಾಹ್ನ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಸಂಘದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ ಕಥಾ ಪ್ರಸಂಗ ನಡೆಯಿತು.