ಡೀಮ್ಟ್‌ ಫಾರೆಸ್ಟ್‌ ವಾಸ್ತವ್ಯಕ್ಕೆ ದೊರೆತ ಹಕ್ಕು ಪತ್ರಕ್ಕೆ ಬ್ಯಾಂಕ್‌ ಸಾಲ ದೊರೆಯದು -ಬಿಪಿನ್‌ಚಂದ್ರ ಪಾಲ್‌

ಕಾರ್ಕಳ : ಸಚಿವ ವಿ. ಸುನಿಲ್ ಕುಮಾರ್ ಅವರು ಇತ್ತೀಚೆಗೆ ಫಲಾನುಭವಿಗಳಿಗೆ ಹಂಚಿದ ಹಕ್ಕುಪತ್ರ ಊರ್ಜಿತವಲ್ಲ. ಸುಪ್ರಿಂ ಕೋರ್ಟಿನ ಹಸಿರು ಪೀಠದಲ್ಲಿ ಇತ್ಯರ್ಥವಾಗದೇ ಹಕ್ಕು ಪತ್ರ ವಿತರಿಸಿದ ಕ್ರಮ ಕಾನೂನು ಬಾಹಿರ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರಪಾಲ್ ನಕ್ರೆ ತಿಳಿಸಿದರು.

ಅವರು ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋರ್ಟಿನಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಣೆಯಾಗಿಲ್ಲ. ಇದೀಗ ಸಚಿವರು ಸುಳ್ಳು ಹೇಳಿ ಹಕ್ಕುಪತ್ರ ವಿತರಿಸಿದ್ದಾರೆ. ಅವರು ನೀಡಿದ ಹಕ್ಕುಪತ್ರ ಹಿಡಿದು ಯವುದೇ ರಾಷ್ಟ್ರೀಕೃತ ಬ್ಯಾಂಕಿಗೆ ಹೋದರೆ ಸಾಲ ದೊರೆಯುವುದಿಲ್ಲ. ಅಧಿಕಾರಿಗಳು ರಾಜಕೀಯ ಒತ್ತಡದಿಂದ ಸುಳ್ಳು ಹಕ್ಕು ಪತ್ರ ಕೊಡಬಾರದು. ಹಿಂದೆ ಈ ರೀತಿ ವಿತರಿಸಲು ಮುಂದಾದ ಅಧಿಕಾರಿಗಳು ಭಡ್ತಿ ಹಾಗೂ ವೇತನ ಕಡಿತದ ಕಹಿಯನ್ನು ಅನುಭವಿಸಿದ್ದಾರೆ ಎಂದರು.

11 ಷರತ್ತುಗಳಿವೆ
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಸಚಿವರು ಹಂಚಿದ ಹಕ್ಕುಪತ್ರದಲ್ಲಿ 11 ಷರತ್ತುಗಳಿವೆ. ಹಕ್ಕಿನ ಮಂಜೂರಾತಿಯಲ್ಲಿ ಕುಮ್ಕಿ ಮಿತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವೇ ಅಂತಿಮವಾಗಿರುತ್ತದೆ ಎಂದಿದೆ. ಹೀಗಾಗಿ ನೀಡಲಾದ ಮಂಜೂರಾತಿ ಮಾರ್ಪಡಿಸುವ ಅಥವಾ ರದ್ದುಗೊಳಿಸುವುದಕ್ಕೆ ಅವಕಾಶಗಳಿವೆ. ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರಕಾರ ಕಾನೂನು ತಿದ್ದುಪಡಿ ಮಾಡಿ ಶಾಶ್ವತ ಹಕ್ಕು ಪತ್ರ ನೀಡಬೇಕು. ಸಚಿವ ಸುನಿಲ್ ಕುಮಾರ್ ಮತ್ತು ಬಿಜೆಪಿ ನಾಯಕರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಮಾತನಾಡುವುದನ್ನು ನಿಲ್ಲಿಸಿ ಜನರಿಗೆ ಆಶ್ವಾಸನೆ ಕೊಟ್ಟಂತೆ ನುಡಿದಂತೆ ನಡೆಯಬೇಕು. ಕಾಂಗ್ರೇಸ್ ಪಕ್ಷ ಅಧಿಕಾರಕ್ಕಾಗಿ ವಾಮ ಮಾರ್ಗ ಮಾಡುವುದಿಲ್ಲ ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ದೇವಾಡಿಗ, ವಕ್ತಾರ ಶುಭದ ರಾವ್, ಕಾಂಗ್ರೇಸ್ ಉಪಾಧ್ಯಕ್ಷ ರವಿಶಂಕರ್ ಶೇರಿಗಾರ್, ಉದಯ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.













































































error: Content is protected !!
Scroll to Top