Saturday, January 22, 2022
spot_img
Homeವೈರಲ್ ಸುದ್ದಿಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ.  ಈ ಮೀನಿನ ವಿಶೇಷತೆ ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದೆ. ಇದೇ ಕಾರಣದಿಂದ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ. ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಈ ವಿಚಿತ್ರ ಮೀನು ಸಿಕ್ಕಿ ಬಿದ್ದಿದೆ. ನಿತ್ಯ ಹಂಪಿ ಹಾಗೂ ವಿರುಪಾಪುರ ಗಡ್ಡಿ ನದಿಯಲ್ಲಿ ಬೋಟ್ ನಡೆಸುವ ರಫಿ, ಈ ಹಿಂದೆ ಎಂದೂ ಈ ರೀತಿಯ ಮೀನನ್ನು ನೋಡಿಲ್ಲವಂತೆ. ಸ್ಥಳೀಯರು ಕೂಡ ಇದೇ ಮೊದಲ ಬಾರಿ ನಾವು ಇಂಥಹ ಮೀನನ್ನು ನೋಡಿದ್ದು ಎನ್ನುತ್ತಿದ್ದಾರೆ. ಅಪರೂಪದ ಮೀನನನ್ನು ಮತ್ತೆ ನದಿಗೆ ಬಿಟ್ಟಿರುವುದಾಗಿ ರಫಿ ತಿಳಿಸಿದ್ದಾರೆ.

ಶೀಪ್ ಶೆಡ್ ಫಿಶ್ ಎಂದು ಕರೆಯಲ್ಪಡುವ ಮೀನು ಇದು. ಸಾಮಾನ್ಯವಾಗಿ ಈ ಮೀನುಗಳು ಬಂಡೆಗಳು, ಜೆಟ್ಟಿಗಳು ಮತ್ತು ಸೇತುವೆಗಳ ಬಳಿ ಕಂಡುಬರುತ್ತವೆ. ಕಪ್ಪು ಮತ್ತು ಬಿಳಿ ಪಟ್ಟೆಗಳಿಂದಾಗಿ ಅವುಗಳನ್ನು `ಕನ್ವಿಕ್ಟ್‌ ಫಿಶ್’ ಎಂದೂ ಕರೆಯುತ್ತಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಶೀಪ್‌ ಶೆಡ್ ಮೀನಿನ ಬಾಯಿಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮುತ್ತಿನಂತೆ ಜೋಡಿಸಲ್ಪಟ್ಟ ಹಲ್ಲುಗಳು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಹಲ್ಲುಗಳು ಥೇಟ್ ಮನುಷ್ಯರ ಹಲ್ಲುಗಳನ್ನೇ ಹೋಲುತ್ತವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!