ಕಾರ್ಕಳ : ಬಿಜೆಪಿ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಡಾ. ಸುಬ್ರಹ್ಮಣ್ಯನ್ ಸ್ವಾಮೀ ಅವರು ಡಿ. 8 ರಂದು ಕಾರ್ಕಳ ಭೇಟಿ ನೀಡಿದರು. ಮಂಗಳೂರಿನಿಂದ ಶೃಂಗೇರಿ ತೆರಳುತ್ತಿದ್ದ ಅವರು ಕಾರ್ಕಳ ಬೈಪಾಸ್ ಪುಲ್ಕೇರಿ ಲಕ್ಷ್ಮೀ ಸಭಾಭವನದಲ್ಲಿ ಉಪಾಹಾರ ಸವಿದರು. ಗಣಪತಿ ಹೆಗ್ಡೆ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಸ್ವಾಮಿ ಅವರು ತನ್ನ ಕುಟುಂಬದವರೊಂದಿಗೆ ಶೃಂಗೇರಿ ಸಾಗಿದರು.
ಕಾರ್ಕಳದಲ್ಲಿ ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ
























