ರವೀಂದ್ರ ಶೆಟ್ಟಿ ಬಜಗೋಳಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಕಾರ್ಕಳ : ಉದ್ಯಮಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದ ಮುಂದಾಳು, ಕೊಡುಗೈ ದಾನಿ ರವೀಂದ್ರ ಶೆಟ್ಟಿ ಬಜಗೋಳಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರಾವಳಿ ಕೇಸರಿ ಸೇವಾ ಟ್ರಸ್ಟ್‌ ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ವತಿಯಿಂದ ದರೆಗುಡ್ಡೆಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಶನೀಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರು ರವೀಂದ್ರ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು. ಉದ್ಯಮಿ ಭಾಸ್ಕರ್‌ ಎಸ್.‌ ಕೋಟ್ಯಾನ್‌, ಮಂಗಳೂರು ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ, ಪ್ರದೀಪ್‌ ಕಟೀಲೇಶ್ವರಿ, ಜಗದೀಶ್‌ ಅಧಿಕಾರಿ, ದ.ಕ. ಹಿಂಜಾವೇ ಅಧ್ಯಕ್ಷ ಹರೀಶ್‌ ಕುಮಾರ್‌, ಉಡುಪಿ ಜಿಲ್ಲಾ ಹಿಂಜಾವೇ ಪ್ರ. ಕಾರ್ಯದರ್ಶಿ ಮಹೇಶ್‌ ಬೈಲೂರು, ಅಶೋಕ್‌ ಶೆಟ್ಟಿ ಬೆಲೊಟ್ಟು, ಸಮಿತ್‌ ರಾಜ್‌ ದರೆಗುಡ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top