ಕ್ರೀಡಕೂಟ ಆಯೋಜನೆ ಸಂಘಟನೆಗೆ ಪೂರಕ- ಆನಂದ ಪೂಜಾರಿ

ಕಾರ್ಕಳ : ಕ್ರೀಡಕೂಟಗಳ ಆಯೋಜನೆಯಿಂದ ಸಂಘಟನೆ ಸಾಧ್ಯ. ಸಂಘಟನೆಯು ಯುವಕರು ಒಂದುಗೂಡಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುವುದು ಎಂದು ತಾಲೂಕು ಪ್ರಾ.ಶಾ.ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಪೂಜಾರಿ ಹೇಳಿದರು. ಅವರು ಇತ್ತೀಚೆಗೆ ಶಾಂತಿ ಯುವಕ ವೃಂದ ಜಾರ್ಕಳ ಇದರ ವತಿಯಿಂದ ಜಾರ್ಕಳದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಬಳಿಕ ಮಾತನಾಡಿದರು. ಶಾಂತಿ ಯುವಕ ವೃಂದದ ಅ‍ಧ್ಯಕ್ಷ ಸದಾನಂದ ಸಾಲಿಯಾನ್‌ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಉದ್ಯಮಿ ನವೀನ್ ನಾಯಕ್ ನಿಟ್ಟೆ, ಪಂಚಾಯತ್‌ ಸದಸ್ಯರಾದ ರಾಜೇಶ್‌ ಶೆಟ್ಟಿ, ವಸಂತ ಕುಲಾಲ್‌, ಉದಯ ಕುಮಾರ್, ಬಸ್ರಿ ಬೈಲೂರು, ಸುಧಾಕರ ಕೋಟ್ಯಾನ್ ಗರಡಿ ಮನೆ, ಕಮಲಾಕ್ಷ ನಾಯಕ್, ಉದ್ಯಮಿ ರಾಜೇಶ್ ಶೆಟ್ಟಿ, ಲತೇಶ್ ಶೆಟ್ಟಿ, ಉದಯ ಪೂಜಾರಿ, ಗುರುರಾಜ್ ಮಾಡ ಮತ್ತಿತರರು ಉಪಸ್ಥಿತರಿದ್ದರು. ಆನಂದ್‌ ಕಾರ್ಯಕ್ರಮ ನಿರ್ವಹಿಸಿದರು.









































































































error: Content is protected !!
Scroll to Top