ಪಾರ್ಕಿಂಗ್‌ ವಿಚಾರ ಮಹಿಳಾ ಪೊಲೀಸ್‌ ಜತೆ ವಾಗ್ವಾದಕ್ಕಿಳಿದ ಉದ್ಯಮಿ- ಮುಚ್ಚಳಿಕೆ ಬರೆಸಿದ ಪೊಲೀಸರು

ಕಾರ್ಕಳ : ಪಾರ್ಕಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್‌ರೊಂದಿಗೆ ಉದ್ಯಮಿಯೋರ್ವರು ವಾಗ್ವಾದಕ್ಕಿಳಿದ ಘಟನೆ ಎ. 16ರಂದು ಕಾರ್ಕಳದಲ್ಲಿ ನಡೆದಿದೆ. ಮೂರುಮಾರ್ಗ ಬಳಿಯ ಜವುಳಿ ಮಳಿಗೆ ಎದುರು ವ್ಯಕ್ತಿಯೋರ್ವರು ಬೈಕ್‌ ನಿಲ್ಲಿಸಿದ ಸಂದರ್ಭ ಶುಕ್ರವಾರ ರಸ್ತೆಯ ಬಲಬದಿಯಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗಿದೆ ಎಂದು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ತಿಳಿಸಿದ್ದರು. ಇದನ್ನು ಗಮನಿಸುತ್ತಿದ್ದ ಜವುಳಿ ಮಳಿಗೆ ಮಾಲಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್‌ರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಏನು ನಡೆಯುತ್ತಿದೆ ಎಂದು ತಿಳಿಯಲು ಜನತೆ ಗುಂಪು ಸೇರಿದರು.
ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಉದ್ಯಮಿಯನ್ನು ಪೊಲೀಸ್‌ ಠಾಣೆಗೆ ಕರೆಸಲಾಯಿತು. ಈ ವೇಳೆ ತನ್ನಿಂದ ತಪ್ಪಾಗಿರುವುದಾಗಿ ಉದ್ಯಮಿ ಕ್ಷಮೆಯಾಚಿಸಿದ್ದು, ಬಳಿಕ ಮುಚ್ಚಳಿಕೆ ಬರೆಸಿ ಉದ್ಯಮಿಯನ್ನು ಬಿಡುಗಡೆಗೊಳಿಸಲಾಗಿದೆ.









































































































error: Content is protected !!
Scroll to Top