ಕಾರ್ಕಳ : ದನ ಕಳ್ಳತನ-ಪೊಲೀಸ್‌ ಠಾಣೆಗೆ ದೂರು

ಕಾರ್ಕಳ : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನವನ್ನು ಕಳ್ಳತನ ಮಾಡಲಾಗಿದೆ ಎಂದು ಕುಂಟಲ್ಪಾಡಿ ಬೈಲಡ್ಕ ಮನೆ ಸುನೀಲ್‌ ಕೋಟ್ಯಾನ್‌ ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ಎ. 12ರಂದು 6 ದನಗಳು ಕೊಟ್ಟಿಗೆಯಲ್ಲಿತ್ತು. ಮರುದಿನ ಹಾಲು ಕರೆಯಲು ತೆರೆಳಿದಾಗ ಕಟ್ಟಿ ಹಾಕಿದ ದನಗಳ ಪೈಕಿ 5 ದನಗಳು ಮಾತ್ರ ಕಂಡುಬಂತು. ಕಪ್ಪು ಬಣ್ಣದ 1 ದನವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನಲ್ಲಿತ್ತು ದನ
ಕಾಬೆಟ್ಟು ಶೀತಲ್ ಬಾರ್ ಬಳಿ ಹಿಂಸಾತ್ಮಕ ರೀತಿಯಲ್ಲಿ ದನವನ್ನು ಕಾರಿಗೆ ತುಂಬುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿತ್ತು. ಕಾರಿನಲ್ಲಿ ತನ್ನ 20 ಸಾವರ ರೂ. ಮೌಲ್ಯದ ಕಪ್ಪು ಬಣ್ಣದ ದನವೂ ಇತ್ತು ಎಂದು ಸುನೀಲ್‌ ದೂರಿನಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top