ಕಾರ್ಕಳ : ಮಾಸ್ಕ್‌ ಧರಿಸದವರಿಗೆ ದಂಡ

ಕಾರ್ಕಳ : ತಾಲೂಕಿನಾದ್ಯಂತ ಕೋವಿಡ್‌ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಪೊಲೀಸರು ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಮತ್ತು ಪುರಸಭೆ ಮಾಸ್ಕ್‌ ರಹಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ದಂಡ ವಿಧಿಸುತ್ತಿದ್ದಾರೆ. ಕಳೆದ ವರ್ಷ ಪುರಸಭಾ ಅಧಿಕಾರಿಗಳು ಮಾಸ್ಕ್‌ ಧರಿಸದವರಿಗೆ 100 ರೂ. ಅಂತೆ 300 ಮಂದಿಗೆ ದಂಡ ವಿಧಿಸಿದ್ದಾರೆ. ಈ ವರ್ಷ 60 ಮಂದಿ ಪುರಸಭೆ ಅಧಿಕಾರಿಗಳಿಂದ ದಂಡ ಹೇರಿಸಿಕೊಂಡಿದ್ದಾರೆ. ಕಳೆದ ವರ್ಷ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು 736 ಮಂದಿಗೆ, ಈ ವರ್ಷ 493 ಮಂದಿಗೆ ದಂಡ ವಿಧಿಸಿರುತ್ತಾರೆ. ಕಾರ್ಕಳ ನಗರ ಠಾಣೆ ಪೊಲೀಸರು ಕಳೆದ ವರ್ಷ 577 ಮಂದಿಗೆ ಹಾಗೂ ಈ ವರ್ಷ 56 ಮಂದಿಗೆ ದಂಡ ವಿಧಿಸಿರುತ್ತಾರೆ.





























































































error: Content is protected !!
Scroll to Top