ಕಾರ್ಕಳ : ಕಳೆದ ಮೂರು ತಿಂಗಳಿನಿಂದ ಕೆಟ್ಟು ಹೋಗಿದ್ದ ಮೂರು ಮಾರ್ಗದ ಹೈ ಮಾಸ್ಟ್ ದೀಪವನ್ನು ನ. 24ರಂದು ಪುರಸಭೆ ಸರಿಪಡಿಸಿದೆ. ಈ ಮೂಲಕ ಮೂರುಮಾರ್ಗದಲ್ಲಿ ರಾತ್ರಿ ವೇಳೆ ಬೆಳಕು ಮೂಡುವಂತಾಗಿದೆ. ಕಾರ್ಕಳ ಪೇಟೆಯಲ್ಲಿ ಒಳಚರಂಡಿ ಕಾಮಗಾರಿ ನಡೆಸುವ ಸಂದರ್ಭ ಹೈ ಮಾಸ್ಟ್ ದೀಪದ ತಂತಿ ಕಡಿತಹೋಗಿತ್ತು. ಬಳಿಕ ಅದನ್ನು ಗುತ್ತಿಗೆದಾರರು ಸರಿಪಡಿಸದೇ ಇದ್ದ ಕಾರಣ ಈ ಭಾಗ ರಾತ್ರಿ ವೇಳೆ ಕತ್ತಲೆಯಲ್ಲಿತ್ತು.
ನ್ಯೂಸ್ ಕಾರ್ಕಳ ವರದಿ ಫಲಶ್ರುತಿ
ನ್ಯೂಸ್ ಕಾರ್ಕಳ ಇತ್ತೀಚೆಗೆ ಈ ಹೈಮಾಸ್ಟ್ ದೀಪ ಉರಿಯದ ಕುರಿತು ವರದಿ ಪ್ರಕಟಿಸಿತ್ತು. ಈ ವರದಿಯ ಫಲಶ್ರುತಿಯಾಗಿ ಪುರಸಭೆ ಇದೀಗ ಹೈಮಾಸ್ಟ್ ದೀಪ ದುರಸ್ತಿಪಡಿಸಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.






























































