ಪರ್ಪಲೆಗಿರಿಯಲ್ಲಿತ್ತು ಪುರಾತನ ವಿಷ್ಣು ದೇಗುಲ : ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಸತ್ಯ

ಕಾರ್ಕಳ, ನ. 26: ಪರ್ಪಲೆಗುಡ್ಡದ ತಪ್ಪಲಿನಲ್ಲಿ ಹಿಂದೆ ಪುರಾತನ ವಿಷ್ಣು ದೇಗುಲವಿತ್ತು. ಕಾಲಕ್ರಮೇಣ ಈ ದೇವಸ್ಥಾನ ನಾಶವಾಗಿರುವುದು ಪ್ರಶ್ನಾಚಿಂತನೆಯ ಮೊದಲ ದಿನ ಕಂಡುಬಂದಿದೆ.
ಪರ್ಪಲೆಗಿರಿಯಲ್ಲಿ ದೈವಿಕ ಶಕ್ತಿಯಿದ್ದು, ಈ ಶಕ್ತಿಗಳ ಪುನರುತ್ಥಾನಕ್ಕೆ ಕಾಲ ಕೂಡಿಬಂದಿದೆ. ಮುಂದಿನ ಎರಡು ದಿನಗಳ ಕಾಲ ನಡೆಯುವ ಪ್ರಶ್ನಾ ಚಿಂತನೆಯಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಟ್ರಸ್ಟ್‌ ಪ್ರಮುಖರು ತಿಳಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಕಾರ್ಕಳ, ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನದಂಗವಾಗಿ ನ. 26ರಂದು ಖ್ಯಾತ ದೈವಜ್ಞರಾದ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕರಾದ ಹಿರಣ್ಯ ವೆಂಕಟೇಶ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಗೆ ಚಾಲನೆ ದೊರೆಯಿತು. ಬೆಳಿಗ್ಗೆ 9 ಗಂಟೆಗೆ ಸ್ವರ್ಣ ಪೂಜೆ ನಡೆದು ಸಂಜೆ 5 ಗಂಟೆಯ ತನಕ ಪ್ರಶ್ನಾ ಚಿಂತನೆ ನಡೆಯಿತು. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶ ವಿಠಲ ಸ್ವಾಮೀಜಿ, ಮೂಡಬಿದ್ರೆ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಹೊಸ್ಮಾರು ಗುರುಕುಲ ಆಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಬೈಲೂರು ರಾಮಕೃಷ್ಣಾಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ, ಬಾಲಾಜಿ ಶಿಬಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌, ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದ.ಕ., ಉಡುಪಿ ಜಿಲ್ಲಾ ಮೀನುಗಾರ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಬೋಳ ಶ್ರೀನಿವಾಸ ಕಾಮತ್‌, ಪ್ರಸಾದ್‌ ಕಾಮತ್‌, ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಶೆಟ್ಟಿ ನಾರಾವಿ, ಜಿ.ಪಂ. ತಾ.ಪಂ., ಪುರಸಭೆ ಸದಸ್ಯರು, ಹಿಂದೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮುಖ್ಯರಸ್ತೆಯಿಂದ ಪರ್ಪಲೆಗಿರಿಗೆ ಏರುವ 1 ಕಿ.ಮೀ. ದೂರದಲ್ಲಿ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಯಾವೊಂದು ಸಮಸ್ಯೆ ಎದುರಾಗದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದರು. ಊಟದ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿ ಮಾಡಲಾಗಿದ್ದು, ಸಭಿಕರಿಗೆ ಯಾವೊಂದು ತೊಂದರೆಯಾಗದಂತೆ ಸ್ವಯಂ ಸೇವಕರು ಸೇವೆಗೈಯುತ್ತಿದ್ದರು.
ಅತ್ತೂರು ಪರ್ಪಲೆಗುಡ್ಡದ ಕೃಷ್ಣಗಿರಿಯ ತುತ್ತತುದಿಯಲ್ಲಿ ವಿನೋದ್‌ ಕಾಮತ್‌ ಎಂಬವರಿಗೆ ಸೇರಿದ 4. 54 ಸೆಂಟ್ಸ್‌ ಜಾಗದಲ್ಲಿ 54 ಸೆಂಟ್ಸ್‌ ಜಾಗವನ್ನು ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್‌ಗೆ ನೀಡಿದ್ದು, ಈ ಜಾಗದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಯಿತು. ನ. 25ರಂದು ಇದೇ ಸ್ಥಳದಲ್ಲಿ 60 ಅಡಿ ಎತ್ತರದ 10 ಅಡಿ ಭಗವಾಧ್ವಜವನ್ನು ಸ್ಥಾಪಿಸಲಾಗಿತ್ತು.





























































































































error: Content is protected !!
Scroll to Top