ಕಾರ್ಕಳ, ನ. 1 : ತೆಳ್ಳಾರಿನ ಯುವಕ – ಯುವತಿಯರ ಹಸಿರೇ ಉಸಿರು ಎಂಬ ಸಣ್ಣ ವಾಟ್ಸಪ್ಪ್ ಬಳಗ ಸ್ವಚ್ಛತಾ ಅಭಿಯಾನ ನಡೆಸಿ ಮೆಚ್ಚುಗೆಗೆ ಪಾತ್ರವಾಗಿದೆ. ಆರಂಭದ ದಿನದಲ್ಲಿ 6 ರಿಂದ 8 ಜನರು ಇದ್ದ ಈ ತಂಡ ಈಗ 20 ಜನರ ಗಡಿ ದಾಟಿದೆ.
ಪರಿಸರ ಸಂರಕ್ಷಣೆಯೇ ಹಸಿರು ಉಸಿರು ತಂಡದ ಮುಖ್ಯ ಧ್ಯೇಯ. ರಜಾ ದಿನಗಳಲ್ಲಿ ಒಟ್ಟಾಗುವ ತಂಡದವರು ಅಗತ್ಯ ಇರುವಲ್ಲೆಲ್ಲ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರತಿ ಭಾನುವಾರ ಮುಂಜಾನೆಯ ಒಂದು ಗಂಟೆಗಳ ಕಾಲ ಈ ತಂಡ ಸ್ವಚ್ಛತೆಯ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯರಾದ ಉದಯಕೃಷ್ಣ ಮಾನಸ,ಅರುಣ್,ನಿತಿನ್, ಶಿವಪ್ರಸಾದ್, ಗಜಾನನ, ಉದಯಾನಂದ ನಾತು , ರಘುರಾಮ್ ಪಾಟ್ಕರ್, ಪ್ರದೀಪ್ ಪೂಜಾರಿ, ಸತ್ಯಾನಂದ ಪಡ್ರೆ,ದಿನೇಶ್ ನಾಯಕ್, ಸತೀಶ್ ನಾಯಕ್, ಅಶ್ವಿನಿ, ಸುಪ್ರಿಯಾ, ಪ್ರತೀಕ್ ಪಾಟ್ಕರ್, ಶ್ರದ್ಧಾ, ಅಜಯ್, ಶರಣ್, ಗಣೇಶ್ ಕುಲಾಲ್, ದಿನೇಶ್ ಕುಲಾಲ್, ಸುಮಾ ಪಾಟ್ಕರ್, ಅಶೋಕ್ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ರಸ್ತೆ ಬದಿ, ಬಸ್ ನಿಲ್ದಾಣಗಳಲ್ಲಿ ಕಸ ಸಂಗ್ರಹಿಸಲು ಗೋಣಿ ಚೀಲಗಳ ವ್ಯವಸ್ಥೆಯನ್ನು ಮಾಡಿದೆ, ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ಅರಿವನ್ನು ಜನರಲ್ಲಿ ಮೂಡಿಸಿದೆ.
