ಐಪಿಎಲ್ ಪ್ಲೇ ಆಫ್ ನಿರ್ಣಯವಾಗಲು ಇನ್ನು ಬಾಕಿಯಿರುವುದು ಬರೀ ನಾಲ್ಕು ಪಂದ್ಯಗಳು ಮಾತ್ರ. ಡ್ಯಾಡಿಗಳ ತಂಡ ಎಂದು ಆರಂಭದಿಂದಲೇ ಲೇವಡಿಗೆ ಗುರಿಯಾಗಿದ್ದ ಚೆನ್ನೈ ಅಧಿಕೃತವಾಗಿ ಈ ಸಾಲಿನ ಐಪಿಎಲ್ ಕೂಟದಿಂದ ಹೊರಬಿದ್ದಿದೆ. ಇಷ್ಟರ ತನಕದ ಪಂದ್ಯಗಳ ಮೇಲೊಮ್ಮೆ ಕಣ್ಣು ಹಾಯಿಸಿದಾಗ ಕೆಲವು ಅಚ್ಚರಿಗಳು ಕಾಣ ಸಿಗುತ್ತವೆ. ಚೆನ್ನೈಯ ಕಳಪೆ ನಿರ್ವಹಣೆಯೂ ಅದರಲ್ಲಿ ಒಂದು.
ಎಂಟು ತಂಡಗಳ ಪೈಕಿ ಮುಂಬಯಿ ಇಂ
ಡಿಯನ್ಸ್ ಮಾತ್ರ ಪ್ಲೇ ಆಫ್ ಎಂಟ್ರಿಯನ್ನು ಖಾತರಿಪಡಿಸಿಕೊಂಡಿದೆ. ಉಳಿದ ಆರು ತಂಡಗಳ ಭವಿಷ್ಯ ಇನ್ನುಳಿದಿರುವ ಲೀಗ್ ಹಂತದ ನಾಲ್ಕು ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ. ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಹೊಂದಬೇಕಾಗಿದೆ. ಈ ಪೈಕಿ ಎರಡನೇ ಸ್ಥಾನಕ್ಕೆ ನೆಟ್ ರನ್ ರೇಟ್ ನಿರ್ಣಾಯಕವಾಗುವ ಸಾಧ್ಯತೆಯಿದೆ.
ಮುಂಬಯಿ ಇಂಡಿಯನ್ಸ್ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಸೋಮವಾರದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಫಲಿತಾಂಶ ದ್ವಿತೀಯ ಸ್ಥಾನಿಯನ್ನು ನಿರ್ಧರಿಸಲಿದೆ. ಗೆದ್ದ ತಂಡ ಒಟ್ಟು 16 ಅಂಕ ಸಂಪಾದಿಸುತ್ತದೆ.
ಮೂರಕೆ ಸ್ಥಾನಕ್ಕೆ ಕೆಕೆಆರ್, ಪಂಜಾಬ್, ಹೈದರಾಬಾದ್, ರಾಜಸ್ಥಾನ್ ತಂಡಗಳ ನಡುವೆ ಪೈಪೋಟಿಯಿದೆ. ನಾಲ್ಕೂ ತಂಡಗಳು ತಲಾ 14 ಅಂಕ ಗಳಿಸಿದರೆ ನೆಟ್ ರನ್ ರೇಟ್ ನಿರ್ಣಾಯಕವಾಗುತ್ತದೆ. ನೆಟ್ ರನ್ ರೇಟ್ ವಿಚಾರದಲ್ಲಿ ಹೈದರಾಬಾದ್ ಮತ್ತಮ ಅವಕಾಶ ಹೊಂದಿದೆ.
