ಬೆಂಗಳೂರು, ಅ.6 : ಕನ್ನಡದ ಹಿರಿಯ ನಿರ್ದೇಶಕ ನಾಗೇಶ್ ಬಾಬು (87) ಅವರು ವೃದ್ಧಾಪ್ಯದಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಪ್ರೇಮದ ಪುತ್ರಿ (1957) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಸಿನೇಮಾ ಜೀವನ ಪ್ರಾರಂಭಿಸಿದ ನಾಗೇಶ್ ಬಾಬು ಬೆಟ್ಟದ ಕಲ್ಲು, ಪ್ರತಿಮಾ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. ತುಳುವಿನ ಕೋಟಿ ಚೆನ್ನಯ ಚಿತ್ರಕ್ಕೆ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು.ಅನಿರೀಕ್ಷಿತ ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಬೆಂಗಳೂರಿನಲ್ಲಿ ಅವರು ಸ್ಥಾಪಿಸಿದ್ದ ಪ್ರಗತಿ ಸ್ಟುಡಿಯೊದಲ್ಲಿ 300ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣವಾಗಿದ್ದವು.



































































