ಕಾರ್ಕಳ : ಗುರುದತ್ತಾತ್ರೇಯ ಮಂದಿರ ಕಾಡುಹೊಳೆ, ಕಾಡುಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ, ಮರಾಠಿ ಸಮಾಜ ಸೇವಾ ಸಂಘದ ಇವುಗಳ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಮಹಾತ್ಮ, ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಕಾಡುಹೊಳೆ ಶಾಲಾ ಆವರಣ, ದತ್ತಾತ್ರೇಯ ಮಂದಿರ ಆವರಣ, ಅಂಗನವಾಡಿ ಹಾಗೂ ಹಿಂದೂ ರುದ್ರಭೂಮಿ ಆವರಣ ಸ್ವಚ್ಛಗೊಳಿಸಲಾಯಿತು.
ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಆನಂದ್ ನಾಯ್ಕ್, ಮುಖ್ಯ ಶಿಕ್ಷಕಿ ಮಮತಾ, ದತ್ತಾತ್ರೇಯ ಮಂದಿರ ಅಧ್ಯಕ್ಷ ಉಮೇಶ್ ನಾಯಕ್, ಮರಾಠಿ ಸಮಾಜ ಸಂಘದ ಅಧ್ಯಕ್ಷ ರೂಪೇಶ್ ನಾಯ್ಕ್, ಕಾರ್ಯದರ್ಶಿ ಸದಾಶಿವ ನಾಯ್ಕ್, ಪತ್ರಕರ್ತ ಕೃಷ್ಣ ನಾಯ್ಕ್, ಮನ್ಮಥ ಹೆಗ್ಡೆ, ಹಿರಿಯ ನಾಗರಿಕ ಶ್ರೀಧರ್ ಶೆಟ್ಟಿ, ರಮೇಶ್ ನಾಯ್ಕ್, ಸಂದೀಪ್ ನಾಯ್ಕ್, ರಾಜು ನಾಯ್ಕ್, ಅಶೋಕ್ ನಾಯ್ಕ್, ಎಸ್ ಡಿಎಂಸಿ ಉಪಾಧ್ಯಕ್ಷೆ ಸುಮಲತಾ, ಸವಿತಾ, ಅಡುಗೆ ಸಹಾಯಕಿ ಪ್ರೇಮಾ ಮೊದಲಾದವರು ಉಪಸ್ಥಿತರಿದ್ದರು.
ಕಾಡುಹೊಳೆ : ಸ್ವಚ್ಛತಾ ಕಾರ್ಯ

































































