ಗಾಂಧಿ ಎಂಬ ಆದರ್ಶ ಮತ್ತು ಗಾಂಧಿವಾದಿಗಳೆನ್ನುವವರ ಸೋಗಲಾಡಿತನ

“ಬಿಟ್ಟಿ ಅನ್ನ ನೀಡುವ  ಸಂಸ್ಕೃತಿ ದೇಶದ ದಾರಿದ್ರ್ಯದ ಲಕ್ಷಣ “-ಗಾಂಧೀಜಿ.

ಗಾಂಧೀಜಿಗಿಂದು ಜನ್ಮದಿನ ಈ ಶತಮಾನದ ಮಹಾನ್ ಚೇತನ ,ಮನುಕುಲದ ಮಹಾತ್ಮ, ರಾಷ್ಟ್ರಪಿತ,ವಿಶ್ವಪಿತ. ಕೋಟಿ ಕೋಟಿ ಜನಗಳ ನೋವನ್ನು, ಸಂಕಟವನ್ನು ದಾರುಣ ದುಃಖವನ್ನು ಸ್ವಯಂ ಅನುಭವಿಸಿ ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ಪುಣ್ಯಪುರುಷನ ಜೀವನವನ್ನು ನೆನಪಿಸಿಕೊಂಡು  ಅವರು ನಡೆದ ತತ್ವಾದಶ೯ಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸಂಕಲ್ಪದ ದಿನವೂ ಹೌದು.

  ನಮ್ಮೂರಿಗೂ ಗಾಂಧೀಜಿ ಬಂದಿದ್ದರು.1934 ಫೆ.25 ರಂದು ಸಂಜೆ 6 ಗಂಟೆಗೆ ಗಾಂಧೀಜಿಯವರು ಬ್ರಹ್ಮಾವರಕ್ಕೆ ಬಂದಿದ್ದರು.ಅಂದು ಸಾವಿರಾರು ಮಂದಿ ದಾರಿಯ ಇಕ್ಕಡೆಗಳಲ್ಲಿ ನಿಂತು ಗಾಂಧೀಜಿ ಯವರನ್ನು ಹತ್ತಿರದಲ್ಲಿ ಕಂಡು ಕಣ್ಣು ತುಂಬಿಸಿಕೊಂಡಿದ್ದರು.ಅಂದು ಗಾಂಧೀಜಿ ಬ್ರಹ್ಮಾವರದಲ್ಲಿ ನೀಡಿದ ಸಂದೇಶವೆಂದರೆ “ಅಸ್ಪೃಶ್ಯತೆ ನಿವಾರಣೆಯಾಗದಿದ್ದರೆ ಹಿಂದು ಧಮ೯ಉಳಿಯೋದಿಲ್ಲ”.ಇದು ಇಂದಿಗೂ ಸತ್ಯ.

ಅಂದು ಗಾಂಧೀಜಿ ಹರಿಜನ ಕಲ್ಯಾಣ ನಿಧಿ ಸಂಗ್ರಹಕ್ಕಾಗಿ ಬ್ರಹ್ಮಾವರದಲ್ಲಿ ತಂಗಿದ್ದರು.ಅಂದು ಸಂಗ್ರಹವಾದ  ಮೊತ್ತ ರೂ.221.ಅನಂತರ ಅಲ್ಲಿಗೆ ಸಮೀಪದ ಉಪ್ಪಿನಕೋಟೆಯಲ್ಲಿ ಮಾಬುಕಳ ನದಿ ದಾಟುವ ಸಂದರ್ಭದಲ್ಲಿ ಸಂಗ್ರಹವಾದ ಮೊತ್ತ 16.13.ರೂ.(ಗಾಂಧೀಜಿ ತಮ್ಮ ಹರಿಜನ ಪತ್ರಿಕೆ

 ಮಾಚ್೯30.1934ರಲ್ಲಿ ನಮೂದಿಸಿದ್ದಾರೆ).

ಅಂದು ಬ್ರಹ್ಮಾವರದಲ್ಲಿ ಗಾಂಧೀಜಿಯವರನ್ನು ಬರ ಮಾಡಿಕೊಂಡವರಲ್ಲಿ ಪ್ರಮುಖರೆಂದರೆ ದಿ.ಬಾಳ್ಕಟ್ಟು ಕೃಷ್ಣಯ್ಯ ಹೆಗ್ಡೆ, ಉಡುಪಿಯ ಯು.ಆರ್ ಪಣಿಯಾಡಿ, ಸಾಂತ್ಯಾರು ಅನಂತ ಪದ್ಮನಾಭ ಭಟ್ಟರು;ಪಾಂಗಾಳ ಮಂಜುನಾಥ ನಾಯಕ್ ಮುಂತಾದವರು.

ಗಾಂಧೀಜಿ ಸದಾ ಹೇಳುತ್ತಿದ್ದ ಮಾತೆಂದರೆ “ನನ್ನದು ಯಾವುದೇ ಇಸಂ ಅಲ್ಲ. ನಾನು ನಡೆದು ಬಂದ ದಾರಿ.ಇದನ್ನು ಒಪ್ಪಿ ಅಥವಾ ಬಿಡಿ ಅದು ನಿಮಗೆ ಬಿಟ್ಟದ್ದು ಎಂದು .ಹಾಗಾಗಿ ಗಾಂಧೀಜಿಯವರನ್ನು ಟೀಕಿಸುವ ಅಧಿಕಾರ ನಮಗಿಲ್ಲ.

 ಗಾಂಧೀಜಿಯ ಮಾನವೀಯತೆಯ ದೃಷ್ಟಿ :”ನನ್ನ ಮನೆಯ ಸುತ್ತಲು ಗೋಡೆಗಳನ್ನು ಕಟ್ಟಿಕೊಂಡು, ಕಿಟಕಿಗಳನ್ನು ಮುಚ್ಚಿಕೊಂಡು ಬದುಕುವುದು ನನಗೆ ಇಷ್ಟವಿಲ್ಲ.ನನ್ನ ಮನೆಯ ಮೇಲೆ ಜಗತ್ತಿನ ಎಲ್ಲಾ ದೇಶಗಳ  ಸಂಸ್ಕೃತಿಯ ಗಾಳಿ ಸದಾ ಧಾರಾಳವಾಗಿ ಬೀಸುತ್ತಿರಬೇಕು.”

ಎಂತಹ ಉದಾತ್ತ ಗುಣ ನೋಡಿ ಸವ೯ ಧಮ೯ ಸವ೯ ಸಂಸ್ಕೃತಿ ಪ್ರೀತಿಸುವ ಉದಾತ್ತ ಗುಣ.ಹಾಗಾಗಿ ಗಾಂಧೀಜಿ ಇಂದಿಗೂ ವಿಶ್ವ ಪಿತರಾಗಿ ನಿಂತಿದ್ದಾರೆ.

ಸತ್ಯಗ್ರಾಹಿ ಗಾಂಧೀಜಿ :ಸತ್ಯಾಗ್ರಹವನ್ನು ಜಗತ್ತಿಗೆ ಪರಿಚಯಿಸಿದ ವ್ಯಕ್ತಿ ಗಾಂಧೀಜಿ.ಸತ್ಯಾಗ್ರಹಿಗೆ ಇರಬೇಕಾದ ಪ್ರಮುಖ ಲಕ್ಷಣವೆಂದರೆ ಆತ್ಮ ಬಲ ಪ್ರೇಮ ಬಲ ; ಮಾತ್ರವಲ್ಲ ಸತ್ಯಾಗ್ರಹ ಅನ್ನುವುದು ಜೀವನ ಕ್ರಮ.ಶಾರೀರ ಶಕ್ತಿಗಿಂತ ಆತ್ಮ ಶಕ್ತಿಯೇ ಪ್ರಧಾನ. ಅಚಲ ಶ್ರದ್ಧೆ,  ಸಹನೆ, ದೇವರಲ್ಲಿ ನಂಬಿಕೆ, ಅಂತಃಕರಣ ಶುದ್ಧಿ, ಅಹಿಂಸೆ ಬ್ರಹ್ಮಚಯೆ೯ ಇವು ಸತ್ಯಾಗ್ರಹಿಯ ಬಳಿಯಿರಬೇಕಾದ ಅಸ್ತ್ರಗಳು.ಇಂದು ಸತ್ಯಾಗ್ರಹ ಮಾಡುವವರು ಮೊದಲು ಆಲೋಚಿಸಬೇಕಾದ ವಿಚಾರವಿದು.ಈ ಎಲ್ಲಾ ಗುಣ ಲಕ್ಷಣ ನಮ್ಮಲ್ಲಿ ಇದೆಯಾ ಅನ್ನುವುದನ್ನು ನಾವು ಆತ್ಮ ವಿಮರ್ಶೆ ಮಾಡಿ ಕೊಳ್ಳಬೇಕಾದ ದಿನವೂ ಹೌದು.ಹಾಗಾಗಿ ನಮ್ಮ ಅದೆಷ್ಟೊ ಹೋರಾಟ ತಿರುಗಾಟಗಳು ರಾಜ್ಯದ ಎರಡು ಜಿಲ್ಲೆಗಳನ್ನು ಮುಟ್ಟುವುದರಲ್ಲಿಯೇ ಸುಸ್ತಾಗಿ ಬಿಡುತ್ತವೆ.

 “ನಿನ್ನ ಹಣೆಯ ಬೆವರಿನಿಂದ ನಿನ್ನ ಅನ್ನ ಸಂಪಾದಿಸು.ಬಿಟ್ಟಿ ಅನ್ನ ನೀಡುವ ಸಂಸ್ಕೃತಿ ;ದೇಶದ ದಾರಿದ್ರ್ಯದ ಸಂಕೇತ.ಇದು ಸೋಮಾರಿತನ ಜಡತೆ;ಹಿಂಸಾಕೃತ್ಯಗಳನ್ನು ಹೆಚ್ಚಿಸುತ್ತದೆ.”ಎಂಬ ಕಟ್ಟುವಾದ ಸತ್ಯವನ್ನುಗಾಂಧೀಜಿ ಅಂದೇ ಹೇಳಿ ಬಿಟ್ಟಿದ್ದರು.  ಇದು ನಮ್ಮ ವ್ಯವಸ್ಥೆಗೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯೂ ಹೌದು.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ,ಉಡುಪಿ





































































































































error: Content is protected !!
Scroll to Top