ಕ್ರೈಸ್ಟ್‌ಕಿಂಗ್ : ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಕಾರ್ಕಳ :ಕ್ರೈಸ್ಟ್‌ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು. ಮುಖ್ಯಅತಿಥಿಯಾಗಿ ಪಾಲ್ಗೊಂಡ ಹಿರಿಯಂಗಡಿ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ಯ ಮಾತನಾಡಿ, ಗಾಂಧಿ ಈ ಜಗತ್ತಿನ ಅತ್ಯಪೂರ್ವ ಬೆಳಕು. ಒಂದು ಅದ್ಭುತ ಶಕ್ತಿ. ಗಾಂಧೀಜಿಯಂತೆ ನಾವು ಕೂಡಾ ಸ್ವದೇಶಿ ಮನೋಭಾವನೆ ಬೆಳೆಸಿಕೊಂಡು ರಾಷ್ಟ್ರಕಟ್ಟುವ ಕಾರ್ಯ ಮಾಡಬೇಕು. ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಪ್ರಾಚಾರ್ಯ ಮೇರಿಯನ್ ಡಿ’ಸೋಜಾ, ಆಡಳಿತಾಧಿಕಾರಿ ಕೆವಿನ್ ಡಿ’ಮೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪವಿತ್ರ ಸ್ವಾಗತಿಸಿ, ರೂಪಾಲಿ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ವಂದಿಸಿದರು.

































































error: Content is protected !!
Scroll to Top