ಕಂಬಳ ಓಟಗಾರ ಶಂಕರಬೆಟ್ಟು ಶಂಕರ ಮಡಿವಾಳ್‌ ನಿಧನ

ಕಾರ್ಕಳ : ಕಂಬಳ ಓಟಗಾರ, ಕೋಣಗಳ ಯಜಮಾನ, ಕುಕ್ಕುಂದೂರು ಗ್ರಾ.ಪಂ. ಮಾಜಿ ಸದಸ್ಯ, ಎಪಿಎಂಸಿ ಮಾಜಿ ನಿರ್ದೇಶಕ ಶಂಕರಬೆಟ್ಟು ಶಂಕರ ಮಡಿವಾಳ್‌ (66) ಅವರು ಸೆ. 26ರಂದು ನಿಧನ ಹೊಂದಿದರು. ಕಳೆದ ಮೂರು ವರ್ಷಗಳಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಕಂಬಳ ಕ್ಷೇತ್ರದ ಸಾಧನೆಗಾಗಿ ಹಲವಾರು ಪ್ರಶಸ್ತಿ ಪಡೆದಿರುವ ಇವರು ಕಂಬಳ ರೆಫ್ರಿಯಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಕುಕ್ಕಂದೂರು ಪಂಚಾಯತ್‌ ಮಾಜಿ ಸದಸ್ಯ ಯೋಗೀಶ್‌ ಸಾಲ್ಯಾನ್‌, ಮೂವರು ಪುತ್ರಿರನ್ನು ಅಗಲಿದ್ದಾರೆ.





































































































































error: Content is protected !!
Scroll to Top