ಮುಂಬಯಿ, ಸೆ. 26 : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಹೃದಯಘಾತದಿಂದಾಗಿ ನಿಧನ ಹೊಂದಿದರು.
ಮೂಲತಃ ಮುದರಂಗಡಿ ಸಮೀಪದ ಪಿಲಾರಿನವರಾದ ಇವರು ಉದಯವಾಣಿಯ ಮುಂಬಯಿ ಆವೃತ್ತಿಯಲ್ಲಿ ಕೆಲವು ವರ್ಷ ಉಪಸಂಪಾದಕರಾಗಿ ದುಡಿದು ನಂತರ ಕಾನೂನು ವ್ಯಾಸಂಗವನ್ನು ಪೂರೈಸಿ ನ್ಯಾಯವಾದಿಯಾಗಿ ವೃತ್ತಿ ಕೈಗೊಂಡಿದ್ದರು. ನೂರಾರು ತುಳು – ಕನ್ನಡಿಗ ಸಾಧಕರನ್ನು ಅವರು ಪತ್ರಿಕೆಯ ಮೂಲಕ ಪರಿಚಯಿಸಿದ್ದರು.
ಅವರು ಪನ್ವೇಲ್ನ ಕಾಳೀಕಾಂಬ ವಿಶ್ವಕರ್ಮ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದರ ಆಡಳಿತದಲ್ಲಿರುವ ಕಾಳಿಕಾಂಬಾ ವಿನಾಯಕ ದೇವಸ್ಥಾನ ಪನ್ವೇಲ್ ಇದರ ಸೇವಾ ಕಾರ್ಯದಲ್ಲಿ ಕೂಡಾ ಸಕ್ರಿಯರಾಗಿದ್ದರು. ಮೃತರ ಪತ್ನಿ ಹಾಗೂ ಅಪಾರ ಬಂದು ಮಿತ್ರರುಗಳನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಕಾಳೀಕಾಂಬ ವಿಶ್ವಕರ್ಮ ಸೇವಾ ಸಂಘ ಪನ್ವೇಲ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ಮುಂಬಯಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಹಾಗೂ ಪತ್ರಕರ್ತ ಮಿತ್ರರು ಸಂತಾಪ ಸೂಚಿಸಿದ್ದಾರೆ.


































































