ಕಾರ್ಕಳ, ಸೆ. 26 : ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾಗಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಹಾಗೂ ಪುರೋಹಿತರ ಪರಿಷತ್ ಇದರ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಂಘಟನಾ ಕಾರ್ಯ ನಿರ್ದೇಶಕರಾಗಿ ಆಯ್ಕೆಯಾದ ದೇಂದೊಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್ ಸಾಣೂರು ಅವರನ್ನು ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಹಿರಿಯರಾದ ಸಾಂತಿಂಜ ನರಸಿಂಹ ಭಟ್ ಹಾಗೂ ಕುಂಟಾಡಿ ರಂಗನಾಥ ಆಸ್ರಣ್ಣ, ಯುವ ಪರಿಷತ್ನ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ನೆಕ್ಲಾಜೆಗುತ್ತು, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಜೆ.ಪಿ ಪೆರ್ವಾಜೆ ಉಪಸ್ಥಿತರಿದ್ದರು. ಕೋಶಾಧಿಕಾರಿ ವೆಂಕಟರಾಜ ಭಟ್ ಅತಿಥಿಗಳನ್ನು ಸ್ವಾಗತಿಸಿದರು ಸಂಘದ ಸದಸ್ಯ ಶ್ರೀನಿವಾಸ ಉಪಾಧ್ಯಾಯ ಸುದಾಳ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮಾನಸ ವಂದಿಸಿದರು.ಅಭಯ್ ಉಪಾಧ್ಯಾಯ ಮತ್ತು ಸಮೃದ್ಧ್ ಭಟ್ ಸಹಕರಿಸಿದರು.

































































