ನಿತ್ಯ ಭವಿಷ್ಯ 26-08-2020

ಮೇಷ

ನೀವು ಮಾಡುತ್ತಿರುವ ಯಾವುದೇ ಉದ್ಯೋಗ ಕ್ಷೇತ್ರದಲ್ಲಿ ಈಗ ಹೆಚ್ಚು ಶ್ರಮವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಫಲ ದೊರೆಯಲಿದೆ. ಜನ್ಮದಲ್ಲಿರುವ ಕುಜ ರೋಗಕಾರಕಾನೂ ಆಗಿರುವುದರಿಂದ ಕುಜ ಸ್ಕಂದ ಜಪ ಮನ್ಯು ಸೂಕ್ತ ಪಾರಾಯಣ ಮಾಡುತ್ತಾ ಬನ್ನಿರಿ.ಶನಿಯು  ನಿಮಗೆ ನಿರುದ್ಯೋಗಿಗಳಾಗಿದ್ದಲ್ಲಿ ಏನಾದರೊಂದು ಉದ್ಯೋಗವನ್ನು ನೀಡಿಯೇ ನೀಡುತ್ತಾನೆ ಆಪ್ತರ ಕಾಲೋಚಿತ ಸಲಹೆ ನಿಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ.

ವೃಷಭ

ಗುರು ನಿಮಗೆ ಅನಿಷ್ಟಪ್ರಧಾನನಾದಾಗ ತ್ರಿಮೂರ್ತಿಗಳ ಆರಾಧನೆ ವಿಶೇಷವಾಗಿ ಈಶ್ವರ ಆರಾಧನೆ ಮಾಡಬೇಕು. ನೀವು  ಎಣಿಸಿದಂತೆ ಎಲ್ಲವೂ ನೆರವೇರದೆ ಇದ್ದಾಗ  ಸ್ವಲ್ಪ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ.ವಿರೋಧಿಗಳಿಂದ ಉಪಟಳ ಬರುತ್ತಿರುತ್ತಿರುತ್ತದೆ. ಆರ್ಥಿಕವಾಗಿ ಆಗಾಗ ಖರ್ಚುವೆಚ್ಚಗಳೆ ಅಧಿಕ ತೋರಿಬಂದರೂ ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ ಯಶಸ್ಸನ್ನು ಗೌರವವನ್ನು ದ್ವಿಗುಣ ಗೊಳಿಸಲಿದೆ.

ಮಿಥುನ

ನಿಮಗೆ ಶನಿಯು  ಅಷ್ಟಮದಲ್ಲಿ ರೋಗಕಾರಕನಾಗಿರುವುದರಿಂದ  ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ದೈವಾನುಗ್ರಹವಿರುವ ನಿಮಗೆ ಕಷ್ಟದಲ್ಲಿ ಸುಖದ ಅನುಭವ ಸಿಗಲಿದೆ. ನಿಮ್ಮ ಯಾವುದೇ ವ್ಯವಹಾರದಲ್ಲಿ ಅತಿಯಾದ ಲಾಭವಲ್ಲದಿದ್ದರೂ ನಷ್ಟವಾಗುವುದಿಲ್ಲ. ಕುಜ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಭೂಮಿ ಕ್ರಯ ವಿಕ್ರಯದಲ್ಲಿ ಲಾಭ ಗಳಿಸಲಿದ್ದೀರಿ. ಅತಿಯಾದ ಒತ್ತಡ ಬೇಡ.

ಕರ್ಕಾಟಕ

ಬಾಧಕಾಧಿಪತಿ ಶುಕ್ರ ಸುಖ ಸ್ಥಾನದಲ್ಲಿ ಇರುವುದರಿಂದ ಚಂದ್ರ ರೋಗಕಾರಕ ಸ್ಥಾನದಲ್ಲಿ ಇರುವುದರಿಂದ ಶ್ರೀಸೂಕ್ತ ಜಪ ಮಾಡುತ್ತಾ ಬನ್ನಿರಿ. ಯಾವುದೇ ಕೆಲಸವನ್ನು ಮಾಡುವಾಗ ಮುಂದಾಲೋಚನೆ ಮಾಡಿಯೇ ಮಾಡಿರಿ. ಮಹಿಳೆಯರ ವಿಷಯದಲ್ಲಿ ಎಚ್ಚರವಿರಬೇಕು.ಹಿರಿಯರ ಆರೋಗ್ಯ ಸಮಸ್ಯೆ ನಿಮ್ಮ ಮಾನಸಿಕ ಕಿರಿಕಿರಿಗೆ ಕಾರಣವಾದೀತು.

ಸಿಂಹ

ಕುಜನ ದೋಷ ಪ್ರಯುಕ್ತ ಕುಜ ಮಂತ್ರವನ್ನು ಹೇಳುತ್ತಾ ಬನ್ನಿರಿ. ದೈವಾನುಗ್ರಹವಿರುವುದರಿಂದ ಎಷ್ಟೇ ಮಾನಸಿಕ ಗೊಂದಲವಾದರೂ ಸಹಿಸಿಕೊಳ್ಳಲು ಶಕ್ತರಾಗುತ್ತೀರಿ. ನಿಮ್ಮ ಕೌಟುಂಬಿಕ ಸಮಸ್ಯೆಯ ಸ್ವರೂಪ ಪೂರ್ತಿ ಬದಲಾವಣೆಯಾಗಲಿದೆ.ಸಿಂಹದಂತೆ ಸಿಟ್ಟು ಘರ್ಜನೆ ಇರುವ ನೀವು ಶಾಂತ ಸ್ವರೂಪಿಯಾಗಿರಿ .ವಾಹನ ಸಂಚಾರದಲ್ಲಿ ಜಾಗ್ರತೆ ಇರಲಿ .

ಕನ್ಯಾ

ಅಷ್ಟಮದಲ್ಲಿ  ಕುಜನಿರುವುದರಿಂದ ಮಾಡುವ ವ್ಯವಹಾರಗಳ ಬಗ್ಗೆ ಮತ್ತೆ ಮತ್ತೆ ವಿಚಾರ ಮಾಡಿಕೊಂಡೇ ಮುಂದುವರಿಯಬೇಕು.ಆರ್ಥಿಕವಾಗಿ ನಿಮ್ಮ ವ್ಯವಹಾರ ತಪ್ಪಿ ಹೋಗಲಿದೆ. ವಾಹನಗಳು ಆಗಾಗ ಖರ್ಚು ಮಾಡಿಸುತ್ತಲೇ ಇರುತ್ತವೆ .ಅಲರ್ಜಿಯ ಪೀಡೆ ವೈದ್ಯರಿಗೆ ಆಶ್ಚರ್ಯವಾಗಲಿದೆ .ಸುಖಸ್ಥಾನದ ಗುರು ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ  ಮಾಡಲಿದೆ.

ತುಲಾ

ಸುಖ ಸ್ಥಾನದ ಶನಿ ದೇಹಕ್ಕೆ ಆಯಾಸ ಕೊಟ್ಟರೂ ನಿಮ್ಮ ದೇವರ ಆರಾಧನೆಯ ಫಲವಾಗಿ ಮನಸ್ಸು ಹಗುರವಾಗಲಿದೆ.ಮಿತ್ರರ ಸಹಾಯದಿಂದ ನಿಮ್ಮ ಅನೇಕ ತೊಂದರೆಗಳು ಪರಿಹಾರವಾಗಲಿವೆ. ಮನೆಯ ಹುಡುಕಾಟದಲ್ಲಿದ್ದೀರಾ . ಇನ್ನೂ ಚಿಂತೆ ಬೇಡ. ಒಳ್ಳೆಯ ಮನೆ ಸಿಗಲಿದೆ. ದೇವತಾ ದರ್ಶನ ಭಾಗ್ಯವಿದೆ. ಮನೆಗೆ ಆಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ.

ವೃಶ್ಚಿಕ 

ನಿಮಗೆ ನೀವು ಮಾಡುವ ಕೆಲಸ ಅನ್ಯಾಯ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಮಾಡಲಿದ್ದೀರಿ.ಎಚ್ಚರವಿರಲಿ ಸಹನೆಯಿರಲಿ.ಹಣಕಾಸಿನ ವಿಷಯದಲ್ಲಿ ಆಡಂಬರ ಬೇಡ. ಸಾಂಸಾರಿಕವಾಗಿ ಹೆಂಡತಿಯೊಂದಿಗೆ ಸ್ವಲ್ಪ ಮಟ್ಟಿನ ವಿರಸ ಇರುತ್ತದೆ . ಕುಟುಂಬದ ಇತರ ಸದಸ್ಯರ ಜೊತೆಗೆ ಅಭಿಪ್ರಾಯ.ಭೇದವಿರುತ್ತದೆ. ವಿದ್ಯಾರ್ಥಿಗಳು ಯಶಸ್ವಿಯಾಗುವರು.

ಧನು

ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿ ಬರಲಿದೆ .ಅವಿವಾಹಿತರಿಗೆ  ವಿವಾಹ ಸಂಬಂಧ ಮಾತುಕತೆ ನಡೆಯಲಿದೆ. ಮಹಿಳೆಯೊಬ್ಬರಿಂದ ಮದುವೆ ನಿಲ್ಲುವ ಸಾದ್ಯತೆ ಇರುತ್ತದೆ.ದೇವಿ ಆರಾಧನೆಯೊಂದಿಗೆ ಕೆಲಸವನ್ನು ಆರಂಭಿಸಿ . ನಿಮ್ಮ ಮನೆಯ ಕೆಲಸವನ್ನು ಬಿಟ್ಟು ಇತರರ ಕೆಲಸಕ್ಕಾಗಿಯೇ  ನಿಮ್ಮ ಕೆಲಸವನ್ನು ಹಾಳು ಮಾಡಲಿದ್ದೀರಿ.ಅನಗತ್ಯವಾದ ಖರ್ಚು ವೆಚ್ಚಗಳು ಬರಲಿವೆ .

ಮಕರ

ಕೋರೋನಾದ ಕಾರಣ ನಿಮ್ಮ ವ್ಯವಹಾರಗಳೆಲ್ಲವೂ ಸ್ಥಗಿತಗೊಂಡಿದ್ದರೂ ಬರುವ ಆದಾಯಕ್ಕೆ ಕೊರತೆ ಇರಲಾರದು. ಆದರೂ ಜನ್ಮದ ಶನಿ ನಿಮ್ಮ ಜಪ ಭಕ್ತಿಯನ್ನು ನಿರೀಕ್ಷಿಸುತ್ತಿದ್ದಾನೆ.ಅನಿರೀಕ್ಷಿತ ಪ್ರಯಾಣದಿಂದ ಒಮ್ಮೆಯೇ ಖರ್ಚು ಬರಲಿದೆ. ಅನವಶ್ಯಕವಾಗಿ ಸತಿ-ಪತಿಯರ ನಡುವೆ ಪ್ರೀತಿ ವಿಶ್ವಾಸಕ್ಕೆ ಕೊರತೆ ಬರಲಿದೆ. ಕಾರ್ಯ ವಿಳಂಬ ಮಾನಸಿಕ ಒತ್ತಡ ಬರಲಿದೆ.

ಕುಂಭ

ಕುಟುಂಬದವರ ಸಮಯಕ್ಕೆ ಬೇಕಾದ ಹಾಗೆ ಸಹಕಾರ ಸಿಗುವುದರಿಂದ  ನೀವು ಎಲ್ಲ ವಿಷಯದಲ್ಲಿ ಯಶಸ್ವಿಯಾಗುವಿರಿ. ವಿವಾಹ ಸಂಬಂಧಿ ವಿಷಯ ಒಮ್ಮೆ ನಿಶ್ಚಯವಾಗಿ ಮತ್ತೆ ಮುಂದೂಡಲಿದೆ.  ಹಣದ ಅಡಚಣೆ ಬಂದು ಒಮ್ಮೆಯೇ ಆತಂಕವಾಗಲಿದೆ. ನಿಮ್ಮ ಪತ್ನಿಗೆ ಅನಾರೋಗ್ಯದಿಂದಾಗಿ ನಿಮ್ಮ ವಯಕ್ತಿಕ ಆರೋಗ್ಯ ಏರುಪೇರಾಗಲಿದೆ. ರಾಜಕೀಯದವರಿಗೆ ಅವಮಾನ ಎದುರಾಗಲಿದೆ.

ಮೀನ

ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಒಟ್ಟು ಗೊಂದಲ ನಿರ್ಮಾಣವಾಗಲಿವೆ.ಹಣಕಾಸಿನ ನಿಮ್ಮ ಲೆಕ್ಕಾಚಾರ ಬುಡಮೇಲಾಗಲಿದೆ .ಜಾಗ್ರತೆವಹಿಸಿರಿ. ನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿರಿ ಆರ್ಥಿಕ ಉನ್ನತಿ ಪ್ರಗತಿಯ ದಾರಿಯಲ್ಲಿ ಮುನ್ನೆಡೆಯಲಿದೆ .ಅಪಾರ ನಿರೀಕ್ಷೆ ಇಟ್ಟುಕೊಂಡ ನಿಮಗೆ ಆಶಾಭಂಗ ಕೆಲವೊಮ್ಮೆ ಆಗಲಿದೆ. ಇದು ನಿಮ್ಮ ತಿಳಿವಳಿಕೆಯಲ್ಲಿರಲಿ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/80739 73603









































































































error: Content is protected !!
Scroll to Top