ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿ ಗಣೇಶ್ ಸಾಲಿಯಾನ್ ಹಾಗೂ ಕಾರ್ಯದರ್ಶಿಯಾಗಿ ತಾರಾನಾಥ್ ಕೋಟ್ಯಾನ್ ಸೂರಾಲು ಅವರು ಆಯ್ಕೆಯಾಗಿರುತ್ತಾರೆ. ಆ. 24ರಂದು ಸಿಟಿ ಇಂಡಿಯಾ ಕ್ಲಬ್ ನಲ್ಲಿ ನಡೆದ ಯುವವಾಹಿನಿ ಘಟಕದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸಂತೋಷ್ ಬಂಗೇರ ಹಾಗೂ ಮಮತಾ ಆರ್., ಜೊತೆ ಕಾರ್ಯದರ್ಶಿಯಾಗಿ ಅಜಯ್, ಕೋಶಾಧಿಕಾರಿಯಾಗಿ ಅರುಣ್ ಪೂಜಾರಿ ಮಾಂಜ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್ ಕೋಟ್ಯಾನ್, ಸಾಂಸ್ಕೃತಿಕ ನಿರ್ದೇಶಕರಾಗಿ ರಾಕೇಶ್ ಆರ್. ಅಮೀನ್, ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾಗಿ ರವೀಂದ್ರ ನಕ್ರೆ, ಕ್ರೀಡಾ ನಿರ್ದೇಶಕರಾಗಿ ಸಂತೋಷ್ ಪೂಜಾರಿ ಮಾಳ, ಆರೋಗ್ಯ ಸೇವೆಯ ನಿರ್ದೇಶಕರಾಗಿ ಪ್ರವೀಣ್, ಮಹಿಳಾ ನಿರ್ದೇಶಕರಾಗಿ ಮಲ್ಲಿಕಾ ಜಾರ್ಕಳ, ಪ್ರವಾಸ ನಿರ್ದೇಶಕರಾಗಿ ಪ್ರಶಾಂತ್ ಬಜಗೋಳಿ, ವಿದ್ಯಾನಿಧಿ ಸಂಚಾಲಕರಾಗಿ ಪ್ರಕಾಶ್ ಕೋಟ್ಯಾನ್ ಕಾಳಿಕಾಂಬ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಪ್ರಕಾಶ್ ಪೂಜಾರಿ ಕೆರ್ವಾಶೆ, ಗುರುಗಳ ತತ್ವ ಪ್ರಚಾರದ ನಿರ್ದೇಶಕರಾಗಿ ಸಂದೇಶ್ ಕೋಟ್ಯಾನ್, ಸಮಾಜ ಸೇವೆಯ ಅಶೋಕ್ ಸುವರ್ಣ, ಸಂಪರ್ಕ ನಿರ್ದೇಶಕರಾಗಿ ಗಣೇಶ್ ಸಾಲಿಯಾನ್ ಮಿಯ್ಯಾರು, ಉದ್ಯೋಗ ನಿರ್ದೇಶಕರಾಗಿ ಮಧುಕರ್ ಸುವರ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೃಜನ್ ಆಯ್ಕೆಯಾಗಿರುತ್ತಾರೆ.


































































