ನಿತ್ಯ ಭವಿಷ್ಯ- 25-08-2020

ಮೇಷ 

ಉದ್ಯೋಗ  ವ್ಯವಹಾರ ವ್ಯಾಪಾರಗಳಲ್ಲಿ ಸಮಾಧಾನಕರವಾದ ವಾತಾವರಣ ಹಾಗೂ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಆಸ್ತಿ ಕ್ರಯ ವಿಕ್ರಯಗಳಲ್ಲಿ ಕೂಡಾ ಯಶಸ್ವಿಯಾಗುವಿರಿ. ಸಮಾಜದಲ್ಲಿ ಎಲ್ಲರೂ ನಿಮ್ಮನ್ನು ಗುರುತಿಸುವರು.ಸರಿಯಾದ  ಸ್ಥಾನಮಾನ ಗೌರವ ನಿಮಗೆ ಸಿಗಲಿದೆ.ವಿವಾಹ ಮಂಗಳ ಕಾರ್ಯದ ಚಿಂತನೆ ಮನೆಯಲ್ಲಿ ಎಲ್ಲರ ಮಾತಿನಲ್ಲಿ ಬರಲಿದೆ.

ವೃಷಭ

ನೀವು ಮಾಡುತ್ತಿರುವ ವ್ಯವಹಾರ ವ್ಯಾಪಾರಗಳಲ್ಲಿ ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ನಿಧಾನವಾಗಿ ಕಡಿಮೆಯಾಗುತ್ತಲೇ ಬಂದಿವೆ.ಆರ್ಥಿಕವಾಗಿ ಯಾವಾಗಲೂ ಹಿತಮಿತವಾಗಿ ಇರಬೇಕು .ಹಿತ ಶತ್ರುಗಳ ಮಾತುಗಳು ನಿಮ್ಮ ನೆಮ್ಮದಿಯನ್ನು ಕೆಡಿಸಲಿವೆ. ತಾಳ್ಮೆ ಸಮಾಧಾನವನ್ನು ಇಟ್ಟುಕೊಳ್ಳಿರಿ.

ಮಿಥುನ

ನಿಮ್ಮ ವ್ಯವಹಾರ ದೈನಂದಿನ  ಲೆಕ್ಕಾಚಾರಗಳು ದಾರಿ ತಪ್ಪಲಿವೆ. ತಾಗಿಸಿಕೊಳ್ಳುವ, ಬೀಳುವ ಸಾಧ್ಯತ ಇರುತ್ತದೆ .ಎಚ್ಚರವಿರಬೇಕು ಮಂಗಳ ಶುಭ ಕೆಲಸಗಳ ನಿಮಿತ್ತ ಓಡಾಟವಿರುತ್ತದೆ .ಕಲಹ ಬರುತ್ತಿರುತ್ತದೆ.ಕೋರ್ಟು ವ್ಯವಹಾರದಲ್ಲಿ ಸೋಲುವ ಸಾಧ್ಯತೆಯೇ ಹೆಚ್ಚು.ಕೊರೊನಾ ವಿದ್ಯಾರ್ಥಿಗಳ ಜೀವನವನ್ನೇ ಏರುಪೇರು ಮಾಡಿತು .ವಿಷ್ಣು ಸಹಸ್ರನಾಮ ಪಾರಾಯಣ  ಮಾಡಿರಿ.

ಕರ್ಕಾಟಕ

ಮಕ್ಕಳ ಮನಸ್ಸು ಎಳೆಯ ಮನಸ್ಸು .ಅವರಿಗೆ ಒಳ್ಳೆಯ ರೀತಿಯಲ್ಲಿಯೇ ಬುದ್ಧಿ ಮಾತು ಹೇಳಿರಿ. ಶೀತ ಭಾದೆ  ಕಫ ಭಾದೆ ನಿಮ್ಮನ್ನು ಕಾಡಲಿದೆ .ಆತ್ಮ ಗೌರವಕ್ಕೆ ಹೆಚ್ಚು ಮಹತ್ವ ಕೊಡುವ ನೀವು ವ್ಯತ್ಯಾಸವಾದಾಗ ಬೇಸರಿಸುವಿರಿ. ಉದ್ಯೋಗದಲ್ಲಿ ಕೆಲವರಿಗೆ ಒಮ್ಮೆಲೇ ವರ್ಗಾವಣೆಯ ಸೂಚನೆ ಬರಲಿದೆ.ನಿಮ್ಮ ಮೊಬೈಲ್ ನಲ್ಲಿರುವ ಮಹಿಳೆಯರ ಮೆಸೇಜ್ ನಂಬರ್ ಕೂಡಲೇ ಅಳಿಸಿಹಾಕಿರಿ. ಇಲ್ಲವಾದರೆ ಸಂಸಾರದಲ್ಲಿ ಇದು ಬಿರುಗಾಳಿ ಎಬ್ಬಿಸಲಿದೆ.

ಸಿಂಹ

ನಿಮ್ಮ ಪ್ರತಿಯೊಂದು ವ್ಯವಹಾರಗಳು ಉತ್ತಮವಾಗಿ ನಡೆದು ಲಾಭದಾಯಕವಾಗಲಿವ.  ನಿಮ್ಮ ಮಿತ್ರರಲ್ಲಿ , ಸಹೋದ್ಯೋಗಿಗಳಲ್ಲಿ ಕೆಲವೊಮ್ಮೆ ಕಲಹ ಬೇಸರ ಬರಲಿದೆ .ಯೋಚಿಸಿ ಮಾತನಾಡಿ . ದೈವಾನುಗ್ರಹ ಇರುವ ಸಮಯವಾದುದರಿಂದ  ಬಡ್ತಿ ಯೋಗವಿದೆ.  ಜೊತೆಯಲ್ಲಿ ಜವಾಬ್ದಾರಿಯೂ ಹೆಚ್ಚಲಿದೆ.  ಖರ್ಚು ನಿಮ್ಮ ಇತಿಮಿತಿಯಲ್ಲಿರಲಿ .ರವಿ ಬುಧ ಜನ್ಮದಲ್ಲಿ ಇರುವಾಗ ಸ್ವಲ್ಪ ಅಹಂಕಾರ ದರ್ಪವೂ ಇರುತ್ತದೆ.

ಕನ್ಯಾ

ಸುಖ ಸ್ಥಾನದಲ್ಲಿ ಗುರು ಇರುವುದರಿಂದ ಶುಭ ಮಂಗಳ ಕೆಲಸಗಳು ಕುಟುಂಬದಲ್ಲಿ ಸರಕಾರದ ನಿಯಮದಂತೆ ಇತಿ ಮಿತಿಯೊಳಗೆ ನಡೆದೇ ಹೋಗುತ್ತದೆ . ಎಲ್ಲವೂ ನೆಮ್ಮದಿ ವಾತಾವರಣದಲ್ಲಿಯೇ ಮುಂದುವರಿಯುತ್ತಿರುತ್ತದೆ .ಪಂಚಮದಲ್ಲಿ ಶನಿ ಇದ್ದರೂ ಹೂಡಿಕೆಗೆ ಒಳ್ಳೆಯ ಸಮಯ .ಕುಜ ನಿಮ್ಮ ಸಹೋದರ ಸಮನಾದವರಲ್ಲಿ ಭೂಮಿ ಸಂಬಂಧವಾಗಿ ವೈಮನಸ್ಸನ್ನು ತರಲಿದ್ದಾನೆ .

ತುಲಾ

ಬೆಳಿಗ್ಗೆಯ  ನಿಮ್ಮ ಮೊದಲ ಕೆಲಸ  ಶಿವ ಸ್ಮರಣೆ . ತಾಳ್ಮೆ ಸಮಾಧಾನ  ನಿಮ್ಮಲ್ಲಿರಲಿ.ಆಗ ಉದ್ಯೋಗಿಗಳಿಗೆ ನಿಮ್ಮ ಸಕಲ ಸಾಧನೆಗಳಿಗೆ ಸದವಕಾಶಗಳು ಒದಗಿ ಬರಲಿವೆ. ಎಲ್ಲಾ ಹಂತಗಳಲ್ಲಿ ವೈಯಕ್ತಿಕ  ಮುನ್ನೆಚ್ಚರಿಕೆ ಅತೀ ಅಗತ್ಯವಾಗಿದೆ .ಸುಖ ಸ್ಥಾನದಲ್ಲಿ ಶನಿ ಇದ್ದಾನೆ ಎಂಬ ವಿಷಯ ಪ್ರತೀ ಹೆಜ್ಜೆಗೆ ಮನಸ್ಸಿನಲ್ಲಿ ಇರಬೇಕು. ಹೆಜ್ಜೇನು ಗೂಡಿಗೆ ಕೈ ಹಾಕಿದರೆ ಏನಾದೀತು ಎಂಬ ಕನಿಷ್ಠ ಜ್ನಾನ ನಮಗಿರಬೇಕು.

ವೃಶ್ಚಿಕ

ದ್ವಿತೀಯದಲ್ಲಿ ಗುರು ಇರುವುದರಿಂದ ನಿಮ್ಮ ಕೌಟುಂಬಿಕ ಜೀವನದಲ್ಲಿ ಒತ್ತಡಗಳೆಲ್ಲ ದೂರವಾಗಿ ನೆಮ್ಮದಿ ಕಂಡುಬರಲಿದೆ.  ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚಿಂತನೆ ನಡೆಯಲಿದೆ. ನಾಲ್ಕನೆಯ ಮನೆ ಶನಿಯದ್ದಾಗಿರುವುದರಿಂದ ಮನೆಯಲ್ಲಿ ಸಹೋದರನಲ್ಲಿ ಕಲಹ ಮೂಡಿಬರಬಹುದು  ನಿಮ್ಮ ಕೆಲವೊಂದು ವ್ಯವಹಾರಗಳಲ್ಲಿ ಲೆಕ್ಕಾಚಾರ ತಪ್ಪಿ ಹೋಗಲಿದೆ.

ಧನು

ಕುಟುಂಬದಲ್ಲಿ ಆಗಾಗ ಆರೋಗ್ಯದ ಸಮಸ್ಯೆ ಬರುತ್ತಿರುವುದರಿಂದ  ನಿಮ್ಮ ದೈನಂದಿನ ಆಹಾರ ಪದ್ಧತಿ ಹಿತಮಿತ  ಮತ್ತು ಸಮಯಕ್ಕೆ ಸರಿಯಾಗಿರಲಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಬಹಳ ಯೋಚಿಸಿ ಮುನ್ನೆಡೆಯಿರಿ.  ಸೆಪ್ಟೆಂಬರ್ 27 ತಾರೀಕಿನವರೆಗೆ ಸಕ್ಕರೆ ಕಾಯಿಲೆ ಇರುವವರು ಬಹಳ ಎಚ್ಚರ ವಹಿಸಬೇಕು,. ದಾಂಪತ್ಯ ಜೀವನದಲ್ಲಿ ಶುಕ್ರ ವಿರಸವನ್ನು, ತಪ್ಪು ಸಂದೇಶವನ್ನು ತರಲಿದ್ದಾನೆ.

ಮಕರ

ಜನ್ಮದ ಶನಿಯಿಂದಾಗಿ ಹಣ ಕಾಸಿನ ವಿಚಾರವಾಗಿ ,ಶಾರೀರಿಕವಾಗಿ ಎಚ್ಚರವಿರಬೇಕು. ರಾಜಕೀಯದವರಿಗೆ ಉತ್ತಮ ಅಭಿವೃದ್ದಿಯನ್ನು ತೋರಿಸುವ ದಿನಗಳಿವು .ಅಲೆದಾಟವು ಅಧಿಕವಾಗಿದ್ದು ದೇಹಾಯಾಸವಾಗದಂತೆ ಜಾಗ್ರತೆ ವಹಿಸಬೇಕು .ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಬರದಂತೆ ಎಚ್ಚರವಹಿಸಿರಿ.ರವಿ ರೋಗಸ್ಥಾನದಲ್ಲಿ ಬುಧನೊಂದಿಗೆ ಇದ್ದಾನೆ .ನಿಮ್ಮ ಹಿರಿಯರ ಬಗ್ಗೆಯೂ ಎಚ್ಚರವಹಿಸಬೇಕು.

ಕುಂಭ

ದೈವಾನುಗ್ರಹವಿದ್ದು ನಿಮ್ಮ ಎಲ್ಲ ವ್ಯವಹಾರಗಳು ನಿಶ್ಚಿಂತೆಯಿಂದ ಮುಗಿಯಲಿವೆ. ನೀವು ಮಾಡಿರುವ ಸಾಲಗಳೆಲ್ಲ ಮುಗಿಯಲಿವೆ. ಶನಿ ವ್ಯಯದಲ್ಲಿದ್ದಾನೆ .ಜಾಗ್ರತೆ ಬೇಕು. ವೈವಾಹಿಕ ಚಿಂತನೆಗಳು ಕಾರ್ಯರೂಪಕ್ಕೆ ಬರಲಿವೆ .ನಿಮ್ಮ ಎಲ್ಲ ವ್ಯವಹಾರಗಳು ಲಾಭದಾಯಕವಾಗಿದ್ದು ಮುಂದಿನ ವಿಸ್ತರಣೆಗೆ ಸಹಾಯಕವಾಗಲಿದೆ . ನಿಮ್ಮ ಪತ್ನಿಯ ಆರೋಗ್ಯದ ಕಡೆಗೆ ಗಮನವಿರಲಿ.

ಮೀನ

ನಿಮ್ಮ ಮಗಳ ವಿಷಯದಲ್ಲಿ ಮತ್ತು ಇತರ ಅನಗತ್ಯ ಮಾನಸಿಕ ಋಣಾತ್ಮಕ ಭಾವನೆಗಳು ನಿಮ್ಮ ಮನಸ್ಸನ್ನು ಕೊರೆಯುತ್ತಾ ನಿದ್ದೆ ಬಾರದ ರಾತ್ರಿಗಳನ್ನು ಕಳೆಯುತ್ತಿದ್ದೀರಿ .ಲಾಭ ಸ್ಥಾನದ ಶನಿ ಧನಾದಾಯವನ್ನು ಹೆಚ್ಚಿಸಲಿದ್ದಾನೆ ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ  ಮನಸ್ಸಿನ ಮೇಲೆ ಒತ್ತಡ ತರಲಿದೆ. ಆದಷ್ಟು ಯೋಗ ಪ್ರಾಣಾಯಾಮಗಳನ್ನು ಮಾಡುತ್ತಾ ಬನ್ನಿರಿ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/ 80739 73603





































































































































error: Content is protected !!
Scroll to Top