ಕಾಂಗ್ರೆಸ್‌ಗೆ ಮತ್ತೆ ಸೋನಿಯಾ ಗಾಂಧಿಯೇ ಸಾರಥಿ

ದಿಲ್ಲಿ, ಆ. 24: ದಿನವಿಡೀ ನಡೆದ  ಕಾರ್ಯಕಾರಿಣಿ ಬೈಠಕ್‌  ಬಳಿಕ ಸೋನಿಯಾ ಗಾಂಧಿಯನ್ನೇ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಸುವ ತೀರ್ಮಾನಕ್ಕೆ ಕಾಂಗ್ರೆಸ್‌ ಬಂದಿದೆ.

ಆರು ತಿಂಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು, ಅಷ್ಟರ ತನಕ ಸೋನಿಯಾ ಗಾಂಧಿಯೇ ಅಧ್ಯಕ್ಷೆಯಾಗಿ ಮುಂದುವರಿಯುವುದು ಎಂದು 7 ತಾಸುಗಳ ಸುದೀರ್ಘ ಬೈಠಕ್‌  ಬಳಿ ನಿರ್ಣಯಿಸಲಾಯಿತು.

23 ಹಿರಿಯ ನಾಯಕರು ಪಕ್ಷದ ನಾಯಕತ್ವ ಬದಲಾಗಬೇಕೆಂದು ಆಗ್ರಹಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ  ತುರ್ತು ಬೈಠಕ್‌  ಕರೆಯಲಾಗಿತ್ತು. ಆದರೆ ಅಂತಿಮವಾಗಿ ಬೈಠಕ್‌ ನಲ್ಲಿ ಯಾವ ಪ್ರಮುಖ ತೀರ್ಮಾನವನ್ನೂ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸೋನಿಯಾ ಪದತ್ಯಾಗ ಮಾಡುವ ಇಂಗಿತ ವ್ಯಕ್ತಪಡಿಸಿದರೂ ಹೊಸ ಅಧ್ಯಕ್ಷರ ಆಯ್ಕೆ ಕಗ್ಗಂಟಾದ ಕಾರಣ ಚುಕ್ಕಾಣಿ ಮರಳಿ ಸೋನಿಯಾ ಕೈಗೆ ಸಿಕ್ಕಿದೆ.





































































































































error: Content is protected !!
Scroll to Top