ಪಿಂಚಣಿ ಪ್ರತಿಯೊಬ್ಬ ನೌಕರನ ಬದುಕಿನ ಹಕ್ಕುಅನ್ನುವುದನ್ನು ಸುಪ್ರೀಂ ಕೋರ್ಟ್ ತೀಪು೯ ಹೇಳಿದೆ. ಆದರೆ ಇಂದು ಕರ್ನಾಟಕದಲ್ಲಿ ಈ ಬದುಕಿನ ಹಕ್ಕಿನಿಂದ ವಂಚಿತರಾಗುತ್ತಿರುವವರು ಸರಕಾರದಿಂದ ಸಂಬಳ ಪಡೆಯುವ ಖಾಸಗಿ ಕಾಲೇಜಿನ ಖಾಯಂ ಉಪನ್ಯಾಸಕರು ಅನ್ನುವುದು ಆಶ್ಚರ್ಯವಾದರೂ ಸತ್ಯ. ಇದು ಹೇಗೆ ? ಯಾಕೆ ? ಎಲ್ಲಿ? ಎನ್ನು ವುದರ ಕರಾಳ ಪರಿಚಯ ಇಲ್ಲಿದೆ.
1993-94ರಲ್ಲಿ ಖಾಸಗಿ ಪ್ರಥಮ ದಜೆ೯ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರನ್ನು ಖಾಯಂಗೊಳಿಸಲು ಸುಪ್ರೀಂ ಕೋರ್ಟ್ ನೀಡಿದ ತೀಪಿ೯ನಂತೆ ಸಾವಿರಕ್ಕೂ ಮಿಕ್ಕಿ ಉಪನ್ಯಾಸಕರನ್ನು ಖಾಯಂಗೊಳಿಸುವ ಆದೇಶವನ್ನು 2004/05 ರಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಕಾಯ೯ದಶಿ೯ಗಳು ಮತ್ತು ಕಾಲೇಜು ಶಿಕ್ಷಣ ಆಯುಕ್ತ ರು ಜಾರಿಗೊಳಿಸಿದ್ದರು.ಅದರಂತೆ ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭಗೊಂಡಿತ್ತು.ಇದರಲ್ಲಿ ಅದೆಷ್ಟೊ ಮಂದಿ ಉಪನ್ಯಾಸಕರಿಗೆ 2006 ಮಾರ್ಚ್ 31ರ ಮೊದಲು ಕೆಲಸಕ್ಕೆ ಸೇರುವ ಆದೇಶ ಪತ್ರ ಕೈಗೆ ಸಿಕ್ಕಿತು.ಆದರೆ ಇಲಾಖೆಯ ವಿಳಂಬ ನೀತಿಯಿಂದಾಗಿ ಸುಮಾರು 150 ಖಾಯಂಮಾತಿಗೊಂಡ ಉಪನ್ಯಾಸ ಕರುಗಳಿಗೆ ಎಪ್ರಿಲ್ 1ರ ಅನಂತರದಿಂದ ಪ್ರಾರಂಭಗೊಂಡು 2006..07..08..09..ಈ ರೀತಿಯಲ್ಲಿ ಖಾಯಂಮಾತಿ ಆದೇಶ ಪತ್ರ ಪ್ರಾಪ್ತವಾಯಿತು.
ಅಂದೇ ಈ ಉಪನ್ಯಾಸಕರಿಗೆ ಅವರದ್ದೇ ಕಾಲೇಜಿನಲ್ಲಿ ಕಾಯ೯ಭಾರವಿದ್ದಾಗ ಕೂಡ ನೇಮಕಾತಿ ಪತ್ರ ನೀಡುವಾಗ ವಿಳಂಬ ಮಾಡಿರುವುದರಿಂದ ಮುಂದೆ ಪ್ರಮುಖವಾದ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವುದನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ಅಂದೇ ತರಲಾಗಿತ್ತು.

ಹಾಗಾದರೆ ಈ ವಿಳಂಬ ನೀತಿಯಿಂದ ಆದ ಸಮಸ್ಯೆಗಳೇನು? ಇದಾಗಲೇ ಹೇಳಿರುವಂ ತೆ ಕರ್ನಾಟಕದಲ್ಲಿ ಹೊಸ ಪಿಂಚಣಿ 2006 ಎಪ್ರಿಲ್ ನಿಂದ ಜಾರಿಗೆ ಬಂತು.ಇಲ್ಲಿ ಬಹು ಮುಖ್ಯವಾಗಿ 2006 ಎಪ್ರಿಲ್ 1ರಿಂದ ಹಿಡಿದು ಕೊನೆಯ ತನಕ ಆದೇಶ ಪತ್ರ ಪಡೆದು ಖಾಯಂಮಾತಿಗೊಂಡ ಕರ್ನಾಟಕದ ಉಪನ್ಯಾಸಕರುಗಳಿಗೆ ಯಾವ ಪಿಂಚಣಿ ಸಿಗಬೇಕು ಎನ್ನುವುದು ಇನ್ನೂ ನಿಧಾ೯ರವಾಗಿಲ್ಲ.ಅವಾಗಲೇ ರಾಜ್ಯದ ಖಾಸಗಿ ಕಾಲೇಜು ಆಡಳಿತ ಮಂಡಳಿ ಸ್ವಷ್ಟಪಡಿಸಿರುವಂತೆ “ನೀವು ನೇಮಕಾತಿ ಗೊಂಡಿರುವುದು ಸರಕಾರಿ ಆದೇಶದಂತೆ. ಹಾಗಾಗಿ ಈ ಒಪ್ಪಂದ ಸರಕಾರ ಮತ್ತು ಉಪನ್ಯಾಸಕರ ನಡುವೇ ನಡೆದ ಒಪ್ಪಂದ. ಹಾಗಾಗಿ ನಾವು ಬಾಧ್ಯರಲ್ಲ.” ಇದು ಏನೇ ಇರಲಿ, ಇಲ್ಲಿನ ಉಪನ್ಯಾಸಕರುಗಳ ಪ್ರಮುಖ ಬೇಡಿಕೆ ಅಂದರೆ:
1.ನಾವು ಕೂಡಾ 2004/5 ರ ಕರ್ನಾಟಕ ಸರಕಾರದ ಖಾಯಂಮಾತಿ ಆದೇಶದಂತೆ ಖಾಯಂಗೊಂಡವರು.ನಿಮ್ಮ ವಿಳಂಬ ನೀತಿಯಿಂದಾಗಿ ಕೆಲಸದ ಸೇಪ೯ಡೆಯ ಆದೇಶ ಪತ್ರ 2006 ಎಪ್ರಿಲ್ ಅನಂತರ ಸಿಕ್ಕಿದೆ.ಹಾಗಾಗಿ ನಮಗೂ ಕೂಡಾ ಹಳೆ ಪಿಂಚಣಿಯನ್ನೆ ಅನ್ವಯಿಸಬೇಕು ಅನ್ನುವುದು.
2.ಈಗಾಗಲೇ ಕೇಂದ್ರ ಸರಕಾರ ಕೂಡ ಈ ವಿಳಂಬ ನೀತಿಯಿಂದಾಗಿ ತೊಂದರೆಗೊಳಗಾದ ಕೇಂದ್ರ ನೌಕರರಿಗೆ . ಕೇಂದ್ರ ಸರಕಾರ ಎನ್.ಪಿ.ಎಸ್.ತಂದಿದ್ದು 2004ರಲ್ಲಿ ಇದಕ್ಕಿಂತ ಮೊದಲು ನೇಮಕಾತಿ ಪ್ರಕಿಯೆ ಪ್ರಾರಂಭಗೊಂಡು ನೇಮಕಾತಿ ಆದೇಶ ಪತ್ರ ಕಾರಣಾಂತರಗಳಿಂದ ವಿಳಂಬವಾಗಿದ್ದಲ್ಲಿ ಅಂತವರಿಗೆ 2004ಕ್ಕೆ ಪೂವಾ೯ನ್ವಯವಾಗಿ ಹಳೆ ಪಿಂಚಣಿಯನ್ನೆ ನೀಡುವಂತೆ ಆದೇಶ ಹೊರಡಿಸಿ ಕೇಂದ್ರ /ಆಯಾಯ ರಾಜ್ಯ ಸರಕಾರದ ಸಂಬಂಧ ಪಟ್ಟಕಾಯ೯ದಶಿ೯ಗಳಿಗೆ ಸೂಚನೆ ನೀಡಿದೆ.
3.ಹಾಗಾಗಿ ಹಳೆಯ ಪಿಂಚಣಿಯನ್ನು ನಮಗೂ ಅನ್ವಯಿಸಿ ನ್ಯಾಯ ಕೊಡಬೇಕು ಅನ್ನುವುದು ಈ ಎಲ್ಲಾ ಪಿಂಚಣಿ ವಂಚಿತ ಖಾಸಗಿ ಕಾಲೇಜು ಸುಮಾರು 150 ಮಂದಿ ಖಾಯಂ ಉಪನ್ಯಾಸಕರ ಪ್ರಮುಖ ಕೋರಿಕೆ .
4.ಸುಮಾರು 15ರಿಂದ 20 ವಷ೯ ಖಾಯಂಮಾತಿ ನೆಲೆಯಲ್ಲಿ ಸೇವೆ ಸಲ್ಲಿಸಿದ್ದರೂ ಕೂಡ ಗ್ರ್ಯಾಚುಟಿಯನ್ನು ನೀಡುವುದಕ್ಕೆ ಪಿಂಚಣಿ ಜೊತೆ ಟ್ಯಾಗ್ ಮಾಡಿಕೊಂಡು ಅದಕ್ಕೂ ವಿಳಂಬ ನೀತಿ ಉನ್ನತ ಶಿಕ್ಷಣ ವಲಯದಲ್ಲಿ ಕಂಡು ಬಂದಿರುವುದು ಈ ಉಪನ್ಯಾಸಕರ ಮಟ್ಟಿಗೆ ಬದುಕಿನ ಹಕ್ಕಿನ ಮೇಲೆ ಚೆಲ್ಲಾಟವೇ ಸರಿ.
ಉನ್ನತ ಶಿಕ್ಷಣ ಸಚಿವರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಈ ನತದೃಷ್ಟ ಉಪನ್ಯಾಸಕರಿಗೆ ನ್ಯಾಯ ಒದಗಿಸಲು ಮುಂದಾಗಬೇಕು.
ಪೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ







































































