ರಾಷ್ಟ್ರ ಕಟ್ಟುವಲ್ಲಿ ಯುವಜನತೆ ಪಾತ್ರ ಮಹತ್ತರವಾದುದು : ರಾಜೇಂದ್ರ ಭಟ್

0

ಕಾರ್ಕಳ : ಯುವಕರೇ ನಮ್ಮ ದೇಶದ ಆಸ್ತಿ. ರಾಷ್ಟ್ರ ಕಟ್ಟುವಲ್ಲಿ ಯುವಜನರ ಪಾತ್ರ ಮಹತ್ತರವಾದುದು ಎಂದು ಜೇಸೀಸ್‌ ರಾಷ್ಟ್ರಮಟ್ಟದ ತರಬೇತಿದಾರ ರಾಜೇಂದ್ರ ಭಟ್‌ ಅಭಿಪ್ರಾಯಪಟ್ಟರು.

ಅವರು ಆ. 15ರಂದು ಮಂಗಳೂರು ವಿಶ್ವವಿದ್ಯಾಲಯ ಎನ್ನೆಸೆಸ್ ಘಟಕ ಹಾಗೂ ಐಕ್ಯುಎಸಿ ಇದರ ಸಹಯೋಗದಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ಎನ್ನೆಸೆಸ್ ಘಟಕದ ವತಿಯಿಂದ ರಾಷ್ಟ್ರದ ಸಮಗ್ರತೆ ಹಾಗೂ ರಾಷ್ಟ್ರವನ್ನು ಕಟ್ಟುವಲ್ಲಿ ಯುವಜನರ ಪಾತ್ರ ವಿಷಯದ ಕುರಿತು ನಡೆದ ರಾಜ್ಯಮಟ್ಟದ ವೆಬಿನಾರ್‌ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ರಾಷ್ಟೀಯತೆಯನ್ನು ಕಾಪಾಡುವುದು ನಮ್ಮೆಲ್ಲರ ಹಕ್ಕು. ದೇಶ ಸೇವೆಗೆ ನಾವು ಸದಾ ಸಿದ್ಧರಾಗಿರಬೇಕು. ನಾವಿಡುವ ಒಂದು ಸಣ್ಣ ಹೆಜ್ಜೆ ದೇಶದ ಬೆಳವಣಿಗೆಗೆ ಪೂರಕವಾಗಿರಬೇಕೆಂದು ರಾಜೇಂದ್ರ ಭಟ್‌ ಹೇಳಿದರು.
ರಾಜ್ಯ ಮಟ್ಟದ ಎನ್ನೆಸೆಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ನೆಸೆಸ್ ಸಹಕಾರಿ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಎನ್ನೆಸೆಸ್ ಸಂಯೋಜಕಿ ಡಾ. ನಾಗರತ್ನ ಕೆ.ಇ., ಕಾಲೇಜು ಶಿಕ್ಷಣ ಬರಿಯ ಪಾಠವನ್ನು ಮಾತ್ರ ಹೇಳಿಕೊಡದೇ ಸಾಮಾಜಿಕ ಜವಾಬ್ದಾರಿಯನ್ನೂ ತಿಳಿಸುವಂತಿರಬೇಕೆಂದರು.  ವೆಬಿನಾರ್ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್, ಎನ್ನೆಸೆಸ್ ಅಧಿಕಾರಿಗಳಾದ ಹಾಗೂ ಕಾರ್ಯಕ್ರಮ ಸಂಯೋಜಕರಾದ ಸುಚಿತ್ರ, ಶಿವಶಂಕರ್, ಎನ್ನೆಸೆಸ್‍ನ ಸಹಾಯಕ ಅಧಿಕಾರಿ ಶಂಕರ್ ಕುಡ್ವ ಉಪಸ್ಥಿತರಿದ್ದರು.

 

Previous articleಜಯವಂತ ನಾಯಕ್‌ ಕಾರ್ಕಳ ನಿಧನ
Next articleಖಾಸಗಿ ಕಾಲೇಜುಗಳ ಖಾಯಂ ಉಪನ್ಯಾಸಕರಿಗೆ ಪಿಂಚಣಿ ಸಿಕ್ಕೀತೇ?

LEAVE A REPLY

Please enter your comment!
Please enter your name here