ಕಾರ್ಕಳ, ಆ.17 : ಜಿಎಸ್ ಬಿ ಸಮುದಾಯದ ಹಿರಿಯ ಮುಂದಾಳು, ನಿವೃತ್ತ ಉಪನ್ಯಾಸಕ ಜಯವಂತ ನಾಯಕ್ ಕಾರ್ಕಳ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.17ರಂದು ನಿಧನರಾಗಿದ್ದಾರೆ.
ಜಿಎಸ್ ಬಿ ಸಮುದಾಯದ ಸಂಸ್ಕಾರ ಬೋಧ ಎಂಬ ಪತ್ರಿಕೆಯನ್ನು ಅವರು ಸಂಪಾದಕರಾಗಿ ಮುನ್ನಡೆಸುತ್ತಿದ್ದರು. ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದರು.



































