ನಿತ್ಯ ಭವಿಷ್ಯ 12-08-2020

0

ಮೇಷ

ಅಷ್ಟಮಾಧಿಪತಿ ಕುಜ ಜನ್ಮದಲ್ಲಿರುವುದರಿಂದ  ಆರೋಗ್ಯದ ಬಗ್ಗೆ ಎಚ್ಚರವಿರಲಿ. ಭಾಗ್ಯದಲ್ಲಿ ಗುರು ಕೇತು ಇರುವುದರಿಂದ ಭಾಗ್ಯೋದಯದ ಕಾಲ ನೌಕರಿ ಮತ್ತು ಬಡ್ತಿ ಒದಗಿಸಲಿದ್ದಾನೆ.

ವೃಷಭ

ಅಷ್ಟಮದಲ್ಲಿ ಗುರು ಕೇತು ಇರುವುದರಿಂದ ಬೇರೆಯವರ ವಿಷಯದಲ್ಲಿ ಮೂಗುತೂರಿಸಬೇಡಿ . ವ್ಯರ್ಥಖರ್ಚು, ಮಾನಹಾನಿ ಬರಲಿದೆ. ಮನೆ ನಿರ್ಮಾಣ ಯೋಗವಿದೆ. ಪತಿ-ಪತ್ನಿಯರ ನಡುವೆ ವಿರಸ ಬರುವ ಸಾಧ್ಯತೆ ಇದ್ದರೂ ನಿಮ್ಮ ಜಾಣ್ಮೆ ಅದನ್ನು ನಿವಾರಿಸುತ್ತದೆ. ನಾಗದೇವರನ್ನು ಪ್ರಾರ್ಥಿಸಿರಿ

ಮಿಥುನ

ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಕಡೆಗೆ ನಿಮ್ಮ ಪ್ರೀತಿ ವಿಶ್ವಾಸವಿರಲಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕುಜ ಉತ್ತಮ ಧನಾದಾಯವನ್ನು ತರಲಿದ್ದು ನಿಮಗೆ ತುಂಬಾ ಅನುಕೂಲವಾಗಲಿದೆ.

ಕರ್ಕಾಟಕ

ಸಪ್ತಮದಲ್ಲಿರುವ ಶನಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ತರಲಿದೆ. ದೈವಾನುಗ್ರಹ ಕಡಿಮೆ ಇರಲಿದೆ. ಉದ್ಯೋಗ ಪ್ರಾಪ್ತಿ ಯೋಗವಿದೆ. ದಕ್ಷಿಣಾಮೂರ್ತಿ ಅನುಗ್ರಹಕ್ಕಾಗಿ ಈಶ್ವರ ದೇವರನ್ನು ಪ್ರಾರ್ಥಿಸಿರಿ.

ಸಿಂಹ

ಪಂಚಮದಲ್ಲಿ ಗುರು ಕೇತು ಇರುವುದರಿಂದ ಉತ್ತಮ ದೈವಾನುಗ್ರಹ ಪ್ರಾಪ್ತಿಯಿಂದ ನೀವು ನಡೆಸುವ ವ್ಯವಹಾರಗಳೆಲ್ಲವೂ ಯಶಸ್ವಿಯಾಗಲಿದೆ. ಜನ್ಮದಲ್ಲಿ ರವಿ ಬುಧ ಇರುವುದರಿಂದ ನೀವಾಡುವ ಮಾತಿನಿಂದಲೇ ಎಲ್ಲರನ್ನು ಗೆಲ್ಲುವಿರಿ.

ಕನ್ಯಾ

ಸಂಸಾರದಲ್ಲಿ ನಿಮ್ಮವರೇ ಶತ್ರುಗಳಂತೆ ವರ್ತಿಸಿಯಾರು, ಎಚ್ಚರಿಕೆಯಿಂದಿರಿ. ಅಷ್ಟಮದ ಕುಜ ನಿಮಗೆ ಅನೇಕ ರೀತಿಯಲ್ಲಿ ಕಾಟ ಕೊಡಲಿದ್ದಾನೆ. ಸಹೋದರನೊಂದಿಗೆ ಕಲಹ ಬರಲಿದೆ. ರವಿ ಬುಧ ವ್ಯಯದಲ್ಲಿರುವುದರಿಂದ ಉದ್ಯೋಗ .

ತುಲಾ

ಸುಖಸ್ಥಾನದಲ್ಲಿ ಶನಿ ಇರುವುದರಿಂದ ನಿಮ್ಮ ತಾಯಿ ಮನೆಯ ಬಗ್ಗೆ ಎಚ್ಚರವಿರಲಿ. ಕೆಲವೊಂದು ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಸಪ್ತಮದಲ್ಲಿರುವ ಕುಜ ವಿವಾಹಕ್ಕೆ ತಡೆ ಒಡ್ಡುವ ಸಾಧ್ಯತೆಯಿದೆ. ಆಯ-ವ್ಯಯ ಸಮವಾಗಲಿದೆ. ಇಷ್ಟ ದೇವರನ್ನು ಪ್ರಾರ್ಥಿಸಿರಿ.

ವೃಶ್ಚಿಕ

ಅಷ್ಟಮದಲ್ಲಿರುವ ಶುಕ್ರರಾಹುವನ್ನು ಹೊರತುಪಡಿಸಿ ಉಳಿದವರೆಲ್ಲರೂ ಅನುಕೂಲ ಸ್ಥಾನದಲ್ಲಿದ್ದಾರೆ. ಉತ್ತಮ ಆದಾಯ ಬರಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಚ್ಚರವಿರಲಿ. ಮಾತು ಮೃದುವಾಗಿರಲಿ. ಸಂಪದಾನೆಯ ದಾರಿ ಸರಿಯಾಗಿರಲಿ.

ಧನು

ಮನೆಯಲ್ಲಿರುವ ನಿಮ್ಮವರೇ ಶತ್ರುಗಳಂತೆ ವರ್ತಿಸಿದಾಗ ನಮ್ಮವರು ಯಾರು ಇಲ್ಲವೇ ಎಂಬ ನಿರಾಶ ಭಾವನೆ ಮೂಡಿಬರಲಿದೆ. ಕಾಲ ಚಕ್ರವೇ ಹೀಗೆ. ಕುಟುಂಬದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ಮನಸ್ಸಿಗೆ ನೆಮ್ಮದಿ ತರಲಿದೆ. ಮನೆ ದೇವರ ಭಕ್ತಿ ಕಡಿಮೆಯಾಗದಿರಲಿ.

ಮಕರ

ಜನ್ಮದಲ್ಲಿ ಶನಿ ಮತ್ತು ಅಷ್ಟಮದಲ್ಲಿ ರವಿ ಬುಧ ಕಷ್ಟಗಳ ಅನಾರೋಗ್ಯದ ಪರಂಪರೆಯನ್ನೇ ತರಲಿದ್ದಾರೆ. ಸಾಲ ಕೊಡಬೇಡಿ,ತರಬೇಡಿ. ಯಾರಿಗೂ ಜಾಮಿನು ನಿಲ್ಲಬೇಡಿ . ಯಾರಲ್ಲಿಯೂ ಅತಿ ವಿಶ್ವಾಸ ಬೇಡ.

ಕುಂಭ

ಉತ್ತಮ  ದೈವ ಬಲವಿದೆ. ಖರ್ಚುವೆಚ್ಚಗಳು ಅಧಿಕಗೊಳ್ಳಲಿವೆ. ಹಿರಿಯರ ಮಾರ್ಗದರ್ಶನದ ಅಗತ್ಯವಿದೆ. ಅನಿವಾರ್ಯತೆ ಇದ್ದರೆ  ಮಾತ್ರ ದೂರ ಪ್ರಯಾಣವಿರಲಿ. ನೌಕರರು ಎಚ್ಚರವಾಗಿರಿ.

ಮೀನ

ಉತ್ತಮವಾದ ಆದಾಯ ಬರಲಿದೆ. ನೌಕರರಿಗೆ ಕಿರಿಕಿರಿ ಮುಂದುವರಿಯುತ್ತಲೇ ಇರುತ್ತದೆ. ಆದರೆ, ಬಡ್ತಿ ಯೋಗವಿದೆ. ನಿಮ್ಮ ಸಿಟ್ಟು ಹಿಡಿತದಲ್ಲಿರಲಿ. ಹಿರಿಯರ ಮಾತಿಗೆ ಗೌರವವಿರಲಿ. ಸಾಮಾನ್ಯ ನಿಶ್ಶಕ್ತಿ ಬಾಧೆ ನಿಮ್ಮನ್ನು ಕಾಡಲಿದೆ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ, ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ,ಹಿರಿಯಂಗಡಿ, ಕಾರ್ಕಳ.

ಸಂಪರ್ಕ ಮಾಹಿತಿ: 97414 89529, 80739 73603

Previous articleಡಾl ವಿನಾಯಕ ಎನ್. ಅಂಚನ್ ಗೆ ವೈದ್ಯಕೀಯದಲ್ಲಿ ಚಿನ್ನದ ಪದಕ
Next articleಬೆಂಗಳೂರು ಹಿಂಸಾಚಾರಕ್ಕೆ 3 ಬಲಿ ;ಹಲವು ವಾಹನಗಳು ಬೆಂಕಿಗಾಹುತಿ, ಪೊಲೀಸರಿಗೆ ಗಾಯ

LEAVE A REPLY

Please enter your comment!
Please enter your name here